ಪತ್ನಿಯೊಂದಿಗೆ ಸಂಭೋಗ ಮಾಡಿದ 10 ನಿಮಿಷಗಳಲ್ಲಿ ನೆನಪಿನ ಶಕ್ತಿ ಕಳೆದುಕೊಂಡ ಪತಿ!!!

ಗಂಡ ಹೆಂಡತಿಯರ ಮಧ್ಯೆ ಲೈಂಗಿಕತೆ ಸಾಮಾನ್ಯ. ಅದು ದೇಹಕ್ಕೂ ಒಳ್ಳೆಯದು ಅದೇ ರೀತಿ ಇಬ್ಬರ ಸಂಬಂಧ ಒಳ್ಳೆ ರೀತಿಯಲ್ಲಿ ಇರುತ್ತದೆ. ಲೈಂಗಿಕತೆಯ ತೃಪ್ತಿ ದಂಪತಿಗಳಿಗೆ ಮುಖ್ಯ. ಆದರೆ ಸಂಭೋಗ ಮುಗಿದ ನಂತರ ತಾನು ಯಾರು ಎಂಬುದನ್ನೇ ಮರೆತರೇ ? ಅದಕ್ಕಿಂತ ದೊಡ್ಡ ವಿಪರ್ಯಾಸ ಬೇರೆ ಯಾವುದಿಲ್ಲ ಅಂತಾನೇ ಹೇಳಬಹುದು. ಹೌದು ಇಂತಹ ಒಂದು ಸಮಸ್ಯೆಯಿಂದ ಒಬ್ಬ ವ್ಯಕ್ತಿ ಬಳಲುತ್ತಿದ್ದಾರೆ.

66 ವರ್ಷದ ಐರಿಶ್ ವ್ಯಕ್ತಿಯೊಬ್ಬರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಮ್ಮ ಪತ್ನಿಯೊಂದಿಗೆ ಸಂಭೋಗದ ನಂತರ ಈ ವ್ಯಕ್ತಿ ಸ್ವಲ್ಪ ಸಮಯದ ನಂತರ ‘ಅಲ್ಪಾವಧಿಯ ಮರೆವು’ ನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಪುರುಷ ತನ್ನ ಪತ್ನಿಯೊಂದಿಗೆ ಲೈಂಗಿಕ ಸಂಭೋಗದ 10 ನಿಮಿಷಗಳಲ್ಲಿ ತನ್ನ ಅಲ್ಪಾವಧಿಯ ಸ್ಮರಣೆಯನ್ನು ಹೊಂದಿದ್ದಾರೆ ಎಂದು ವೈದ್ಯಕೀಯ ಜರ್ನಲ್ ವರದಿ ಮಾಡಿದೆ.

ಈ ವ್ಯಕ್ತಿ ಲೈಂಗಿಕ ಸಂಭೋಗದ ನಂತರ ಸಂಪೂರ್ಣ ಮರೆವು ಆತನನ್ನು ಆವರಿಸುತ್ತದೆಯಂತೆ. ಎಲ್ಲಾ ನೆನಪಾದಾಗ ಆತನಿಗೆ ಏನೆಲ್ಲಾ ಮರೆತೋದೆ ಎಂಬ ಬೇಸರ ಆಗುತ್ತದೆಯಂತೆ. ಇತ್ತೀಚೆಗೆ ಆತ ತನ್ನ ವಿವಾಹ ವಾರ್ಷಿಕೋತ್ಸವದ ದಿನದಂದೇ ಸ್ಮರಣೆ ಕಳೆದುಕೊಂಡಿದ್ದಾನೆ. ನಂತರ ಆತ ಫೋನ್‌ನಲ್ಲಿ ದಿನಾಂಕ ಗಮನಿಸಿದಾಗ ತನ್ನ ವಿವಾಹ ವಾರ್ಷಿಕೋತ್ಸವವನ್ನು ಮರೆತಿದ್ದಕ್ಕಾಗಿ ಇದ್ದಕ್ಕಿದ್ದಂತೆ ತುಂಬಾ ಬೇಸರಗೊಂಡಿದರಂತೆ. ಏಕೆಂದರೆ ಆ ವ್ಯಕ್ತಿ ಹಿಂದಿನ ಸಂಜೆ ವಿಶೇಷ ಸಂದರ್ಭವನ್ನು ಅಂದರೆ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿದ್ದರೂ, ಅದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲವಂತೆ. ಎಲ್ಲಾ ಮರೆತೋಗಿತ್ತಂತೆ.

ಡಾಕ್ಟರ್ ಹೇಳುವ ಪ್ರಕಾರ ಈ ರೀತಿಯ ಅಪರೂಪದ ಸ್ಥಿತಿಯು ಸಾಮಾನ್ಯವಾಗಿ 50 ರಿಂದ 70 ವರ್ಷ ವಯಸ್ಸಿನವರಲ್ಲಿ ಇರುತ್ತದೆ ಮತ್ತು ಇತ್ತೀಚಿನ ಘಟನೆಗಳಿಂದ ‘ಕೇವಲ ಮರೆವು ಆಗುವ ಸಾಮರ್ಥ್ಯವನ್ನು ಹೊಂದಿದೆ. TGA ಯನ್ನು ಅನುಭವಿಸುತ್ತಿರುವ ಕೆಲವು ಜನರು ಒಂದು ವರ್ಷದ ಹಿಂದೆ ಏನಾಯಿತು ಎಂದು ನೆನಪಿರುವುದಿಲ್ಲ. ಕೆಲವು ಜನರು ಸಾಮಾನ್ಯವಾಗಿ ಕೆಲವೇ ಗಂಟೆಗಳಲ್ಲಿ ತಮ್ಮ ಸ್ಮರಣೆಯನ್ನು ಮರಳಿ ಪಡೆಯುತ್ತಾರೆ ಎಂದು ಡಾಕ್ಟರ್ ಹೇಳುತ್ತಾರೆ.

Leave A Reply

Your email address will not be published.