ರಾಕಿಂಗ್ ಪ್ರೇರಣೆಯಿಂದ ಸ್ಮೋಕಿಂಗ್ !!ಒಂದು ಫುಲ್ ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆ ಪಾಲಾದ ಬಾಲಕ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2
ಈ ಸಿನಿಮಾ‌ ಪಕ್ಕಾ ಮಾಸ್ ಪ್ರಿಯರಿಗೆ ಇಷ್ಟವಾಗುವ ಸಿನಿಮಾ. ಸಿನಿಮಾದಲ್ಲಿ ರಾಕಿ ಭಾಯ್ ಸ್ಟೈಲ್, ಆ್ಯಕ್ಷನ್, ಆಕ್ಟಿಂಗ್‌ಗೆ ಅಭಿಮಾನಿಗಳು ನಿಜವಾಗಲೂ ಮಾರು ಹೋಗಿದ್ದಾರೆ.  ಈ ಸಿನಿಮಾದಲ್ಲಿ ಸಿಗರೇಟು ಸೇದುವ ಅನೇಕ ದೃಶ್ಯಗಳು ಇವೆ. ಹಾಗಾಗಿಯೇ ಕೆಜಿಎಫ್ -2 ರ ಟೀಸರ್ ಬಿಡುಗಡೆಯಾದಾಗ ಕರ್ನಾಟಕ ರಾಜ್ಯ ತಂಬಾಕು ವಿರೋಧಿ ಘಟಕವು ನಾಯಕ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಅವರಿಗೆ ನೋಟಿಸ್ ಕೂಡಾ ನೀಡಿತ್ತು.

ಈಗ ಅದೇ ಪ್ಯಾಶನೇಟ್ ಆಗಿ ಸಿಗರೇಟ್ ಸೇದುವ ದೃಶ್ಯದಿಂದ ಪ್ರೇರಿತನಾದ 15 ವರ್ಷದ ಬಾಲಕನೊಬ್ಬ ರಾಕಿ ಭಾಯ್ ತರಹ ತಾನೂ ಕೂಡಾ ಸಿಗರೇಟ್ ಸೇದಿ ಬಿಟ್ಟಿದ್ದಾನೆ. ನಂತರ ಆರೋಗ್ಯ ಕೆಟ್ಟು ತೀರಾ ಅಸ್ವಸ್ಥನಾಗಿ ಆಸ್ಪತ್ರೆ ಸೇರಿರುವ ಘಟನೆ  ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆ ಹುಡುಗ ಒಂದು ಪ್ಯಾಕ್ ಸಿಗರೇಟ್ ಅನ್ನು ಒಮ್ಮೆಗೆ ಸೇದಿದ್ದಾನೆ. ಎಷ್ಟು ಹೋಗೆ ಒಳಗೆ ತೆಗೆದುಕೊಂಡನೋ ಅದೆಷ್ಟು ಹೊರಕ್ಕೆ ಬಿಟ್ಟನೋ ಗೊತ್ತಿಲ್ಲ. ಆದರೆ ಸಿಗರೇಟು ಸೇದಿದ ಕೂಡಲೇ ಆತನಿಗೆ ತೀವ್ರ ಗಂಟಲು ನೋವು ಮತ್ತು ಕೆಮ್ಮು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಮ್ಮ ಮಗ ಸಿಗರೇಟ್ ಗಳನ್ನು ಸೇದಿದ್ದು, ಅದೂ ಕೂಡ ಮೊದಲ ಬಾರಿಗೆ ಎಂಬುದು ಪೋಷಕರಿಗೂ ತಿಳಿದಿರಲಿಲ್ಲ, ಎದೆಯ ಎಕ್ಸ್ ರೇ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ನಡೆಸಿದಾಗ, ಧೂಮಪಾನಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲೆಯ ಲಕ್ಷಣಗಳು ಈ ಹುಡುಗನ ಬೆರಳುಗಳ ಮೇಲೆ ಕಂಡುಬಂದಿದೆ. ಕೆಜಿಎಫ್ 2 ಚಾಪ್ಟರ್ ಸಿನಿಮಾದಿಂದ ಪ್ರೇರಿತನಾಗಿ ಈ ರೀತಿ ಮಾಡಿದೆ ಎಂದು ಹೇಳಿದಾಗ ಹೆತ್ತವರಿಗೆ ನಿಜಕ್ಕೂ ಶಾಕ್.

ಹೈದರಾಬಾದ್‌ನ ಸೆಂಚುರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗಿದ್ದು, ಆ ಬಳಿಕ ಆತನಿಗೆ ಕೌನ್ಸೆಲಿಂಗ್ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣ ಬಗ್ಗೆ ಆಸ್ಪತ್ರೆಯ ವೈದ್ಯರು ಪ್ರತಿಕ್ರಿಯೆ ನೀಡಿದ್ದು ಚಿಕ್ಕ ಮಕ್ಕಳು ಇಂತಹಾ ಪಾತ್ರಗಳಿಂದ ಬಹುಬೇಗ ಪ್ರಭಾವಿತರಾಗುತ್ತಾರೆ ಎಂದು ಹೇಳಿದ್ದಾರೆ.

Leave a Reply

error: Content is protected !!
Scroll to Top
%d bloggers like this: