ವೆಲ್ಡಿಂಗ್ ಕೆಲಸಕ್ಕೆಂದು ಬಂದವ ಮನೆ ಯಜಮಾನಿಯ ಜೊತೆ ಅನೈತಿಕ ಸಂಬಂಧ ಬೆಳೆಸಿದ | ಮತ್ತೊಬ್ಬನ ಹಿಂದೆ ಬಿದ್ದಿದ್ದಕ್ಕೆ ಅವಳನ್ನೇ ಅಂತ್ಯ ಮಾಡಿದ

ಹೆಂಡತಿ ಚಂಚಲೆ ಆದರೆ ಕೆಲವೊಂದು ಕುಟುಂಬಗಳ ಪರಿಸ್ಥಿತಿ ಎಣಿಸದ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತದೆ. ಗಂಡ ಮಕ್ಕಳು ಇದ್ದು, ಇತ್ತ ಕಡೆ ಸೈಡಲ್ಲಿ ಸೆಟಪ್ ಮಾಡಿಕೊಂಡರೆ ಎದುರಾಗುವ ಪರಿಣಾಮ ಘನಘೋರ. ಅಂತಹುದೇ ಒಂದು ಸ್ಟೋರಿ ಇಲ್ಲಿದೆ ನೋಡಿ.

ಸಂಬಂಧಿಕರ ಗೃಹಪ್ರವೇಶಕ್ಕೆ ಎಂದು ಮುಂಜಾನೆ 5 ಗಂಟೆಗೆ ಮನೆಯಿಂದ ಹೊರಟ ಗಂಡನನ್ನ ಬೀಳ್ಕೊಟ್ಟ ನಂತರ ಮೊಬೈಲ್ ಕರೆಯಲ್ಲಿ ತಲ್ಲೀನಳಾಗಿದ್ದಳು. ಅದರ ಪರಿಣಾಮವೇ ಆಕೆಯ ಲವರ್ ಚಾಕು ಹಿಡಿದು ಬಂದ ಆತ ಆಕೆಯ ಮೇಲೆ ಮನಸೋ ಇಚ್ಛೆ ತಿವಿದು ಅಲ್ಲಿಂದ ಪರಾರಿಯಾಗಿದ್ದ. ತಾಯಿಯ ಚೀರಾಟದ ಧ್ವನಿ ಕೇಳಿ ಮಲಗಿದ್ದ ಮಕ್ಕಳು ಹೊರಗೆ ಬಂದು ನೋಡುವಷ್ಟರಲ್ಲಿ ರಕ್ತದ ಮಡುವಿನಲ್ಲೇ ಪ್ರಾಣ ಬಿಟ್ಟಿದ್ದಳು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಅಂಗಡಿಯ ವೆಲ್ಡಿಂಗ್ ಕೆಲಸಕ್ಕೆಂದು ಬಂದವ ಆಂಟಿ ಜೊತೆ ಲವ್ವಿಡವ್ವಿ ಶುರು ಮಾಡಿದ್ದ. ಅವನು 27ರ ಪ್ರಾಯದ ಯುವಕ. ಆಕೆಯ 35ರ ಆಂಟಿ, ಕದ್ದು ಮುಚ್ಚಿ ಇಬ್ಬರು ಮನೆಯಲ್ಲೇ ಪಲ್ಲಂಗದಾಟ ಶುರುಮಾಡಿಕೊಂಡಿದ್ದಾರೆ. ರೂಮ್‌ನ ವೆಂಟಿಲೇಟರ್ ಮೂಲಕ ಕಳ್ಳ ಬೆಕ್ಕಿನಂತೆ ಬಂದು ಆಂಟಿ ಜೊತೆ ಸರಸವಾಡಿ ಹೋಗುತ್ತಿದ್ದ ಅವನು ಒಂದು ದಿನ ಆಕೆಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿ ಬಿಟ್ಟ.

ಮೇ 15ರ ಮುಂಜಾನೆ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ನಡೆದ ಭೀಕರ ಕೊಲೆಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. 35 ವರ್ಷದ ಭಾಗ್ಯಶ್ರೀ ಮನೆಯ ಮುಂಭಾಗದಲ್ಲಿ ಹೆಣವಾಗಿದ್ದರು. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ದೊಡ್ಡಬೆಳವಂಗಲ ಪೊಲೀಸರಿಗೆ ಹಂತಕನ ಸುಳಿವು ಅದಾಗಲೇ ಸಿಕ್ಕಿತ್ತು. ಆದರೆ, ಆರೋಪಿ ಘಟನೆ ನಂತರ ಪರಾರಿಯಾಗಿದ್ದ.

ಭಾಗ್ಯಶ್ರೀ ಮತ್ತು ಆಕೆಯ ಗಂಡ ಮನೆಮುಂದೆ ತರಕಾರಿ ಅಂಗಡಿ ಮಾಡಲು ಯೋಜನೆ ಹಾಕಿದ್ದರು. ಅದರ ಕೆಲಸಕ್ಕೆಂದು ಬಂದವನೇ ಈ ಯುವಕ. ಗಂಡನ ಕಣ್ಣುತಪ್ಪಿಸಿ ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಈ ಅನೈತಿಕ ಸಂಬಂಧ ಸುಮಾರು 4 ವರ್ಷ ತನಕ ನಡೆದಿತ್ತು. ಅಲ್ಲಿ ತನಕ ಮನೆಯಲ್ಲೇ ಇದ್ದ ಮಹಿಳೆ ನಂತರ ಕೆಲಸಕ್ಕೆ ಹೋಗಲು ಶುರು ಮಾಡಿಕೊಂಡಿದ್ದಾಳೆ. ಅಲ್ಲಿ ಇನ್ನೋರ್ವನ ಜೊತೆ ಲವ್ ಮಾಡೋಕೆ ಶುರುಮಾಡಿದ್ದಾಳೆ. ಇದು ಮೊದಲಿನ ಲವರ್ ಗೆ ತಿಳಿದು ಆಕೆಯ ಕೊಲೆ ಮಾಡಿದ್ದಾನೆ. ಇತ್ತ ಗಂಡನಿಗೆ ಈ ವಿಷಯವೇ ತಿಳಿದಿರಲಿಲ್ಲ. ಎಲ್ಲಾ ವಿಷಯ ತಿಳಿದ ಗಂಡ ಶಾಕ್ ಆಗಿದ್ದಾನೆ.

ಪೊಲೀಸ್ ಠಾಣೆಯಲ್ಲಿ ಈಗ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
Scroll to Top
%d bloggers like this: