ಫ್ಲಿಪ್ ಕಾರ್ಟ್ ಗ್ರಾಹಕರೇ ನಿಮಗಾಗಿ ಇನ್ನೊಂದೇ ದಿನ ಕಾದಿದೆ ಈ ಆಫರ್ !! | 18,000 ರೂ. ಮೌಲ್ಯದ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 500 ರೂ. ಗೆ ಖರೀದಿಸಿ

ಫ್ಲಿಪ್‌ಕಾರ್ಟ್‌ ಗ್ರಾಹಕರಿಗೊಂದು ಸಿಹಿ ಸುದ್ದಿ ಇದೆ. ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೊಳ್ಳಲು ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ಆರಂಭವಾಗಿದೆ. ಈ ಸೇಲ್ ಮೇ 24 ರಿಂದ ಆರಂಭವಾಗಿದ್ದು, ಮೇ 29 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಿವೆ.

ಅಂತೆಯೇ ಈ ಸೇಲ್‌ನಲ್ಲಿ ಸ್ಮಾರ್ಟ್ ಟಿವಿ ಬಹಳ ವಿಜೃಂಭಿಸುತ್ತಿದೆ. 32 ಇಂಚಿನ ಸ್ಮಾರ್ಟ್ ಟಿವಿಗಳಲ್ಲಿ ಅದ್ಭುತ ಡೀಲ್‌ಗಳು ಲಭ್ಯವಿವೆ. 18,000 ರೂ. ಮೌಲ್ಯದ ಕೊಡಾಕ್ 32-ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 500 ರೂ.ಗಳಿಗೆ ಖರೀದಿಸಬಹುದು. ಹೇಗೆ ಅಂತೀರಾ?? ಇಲ್ಲಿದೆ ಮಾಹಿತಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

KODAK 7XPRO ಸರಣಿಯ 32-ಇಂಚಿನ ಸ್ಮಾರ್ಟ್ ಟಿವಿಯ ಪ್ರಾರಂಭಿಕ ಬೆಲೆ ರೂ. 18,499 ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು ರೂ. 11,499 ಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಟಿವಿಯಲ್ಲಿ ಸಂಪೂರ್ಣ 37% ರಿಯಾಯಿತಿ ಲಭ್ಯವಿದೆ. ಇದಲ್ಲದೆ ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, ಅದರ ಬೆಲೆ ಗಣನೀಯವಾಗಿ ಕಡಿಮೆ ಆಗಲಿದೆ.

KODAK 7XPRO ಸರಣಿಯ 32-ಇಂಚಿನ ಸ್ಮಾರ್ಟ್ ಟಿವಿಯಲ್ಲಿ 10,975 ರೂಪಾಯಿಗಳ ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಟಿವಿಯನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಟಿವಿ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 10,975 ರೂ.ಗಳ ರಿಯಾಯಿತಿ ಲಭ್ಯವಿರುತ್ತದೆ. ನೀವು ಸಂಪೂರ್ಣ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾದರೆ ಟಿವಿಯ ಬೆಲೆ 524 ರೂ.ಗಳಿಗೆ ಇಳಿಕೆ ಆಗಲಿದೆ.

ನೀವು ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಳ್ಳಲು ಬಯಸದಿದ್ದರೆ, ಟಿವಿಯಲ್ಲಿ ಬ್ಯಾಂಕ್ ಕೊಡುಗೆಯೂ ಇದೆ. KODAK 7XPRO ಸರಣಿಯ 32-ಇಂಚಿನ ಸ್ಮಾರ್ಟ್ ಟಿವಿ ಖರೀದಿಸಲು, ನೀವು ಐಸಿಐಸಿಐ ಬ್ಯಾಂಕ್ ಅಥವಾ ಆರ್ ಬಿಎಲ್ ಬ್ಯಾಂಕ್ ಕಾರ್ಡ್ ಮೂಲಕ ಪಾವತಿಸಿದರೆ, ನೀವು 1,150 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ. ಅದರ ನಂತರ ಟಿವಿ ಬೆಲೆ 10,349 ರೂ.ಗಳಿಗೆ ಲಭ್ಯವಾಗಲಿದೆ.

Leave a Reply

error: Content is protected !!
Scroll to Top
%d bloggers like this: