ಚಿತ್ರದುರ್ಗದ ಮುರಘಾಮಠಕ್ಕೆ ನೂತನ ಉತ್ತರಾಧಿಕಾರಿ ಘೋಷಣೆ

Share the Article

ಚಿತ್ರದುರ್ಗದ ಮುರುಘಾಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ. ಐತಿಹಾಸಿಕ ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಮುರುಘಾ ಮಠದಲ್ಲೇ ಅಧ್ಯಯನ ಮಾಡುತ್ತಿದ್ದ ಬಸವಾದಿತ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಶುಕ್ರವಾರ ಬೆಳಿಗ್ಗೆ ಮುರುಘಾ ಮಠದ ಶಿರಸಿಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನಡೆದ ಶರಣ ಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಬಸವಾದಿತ್ಯ ಶ್ರೀಗಳಿಗೆ ವಿಭೂತಿ ಧಾರಣೆ ಮಾಡಿ, ರುದ್ರಾಕ್ಷಿ ಮಾಲೆ ಹಾಕಿ ಪುಷ್ಪವೃಷ್ಠಿ ಮಾಡಿ ನೇಮಕ ಮಾಡಿದ್ದಾರೆ.

ಬಸವಾದಿತ್ಯ ಶ್ರೀಗಳು ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಗ್ರಾಮದವರಾಗಿದ್ದಾರೆ. ಚಂದ್ರಕಲಾ-ಶಿವಮೂರ್ತಯ್ಯರ ದಂಪತಿ ಪುತ್ರ ಬಸವಾದಿತ್ಯ. ಸದ್ಯ ಮುರುಘಾಮಠದ ಕಾಲೇಜಲ್ಲಿ ಪಿಯುಸಿ ಓದುತ್ತಿದ್ದಾರೆ. ಉತ್ತಮ ವಿದ್ಯಾಭ್ಯಾಸ, ಸಂಸ್ಕಾರ ನೀಡಿ ಪಟ್ಟಾಧಿಕಾರ ನೀಡುವುದಾಗಿ ಮುರುಘಾಶ್ರೀ ಹೇಳಿದ್ದಾರೆ.

Leave A Reply

Your email address will not be published.