ಭಾರತದಲ್ಲಿ 8000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಈ ಖ್ಯಾತ ಸ್ಟಾರ್ಟ್ ಅಪ್‌ ಗಳು !

ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಸ್ಟಾರ್ಟ್‌ಅಪ್‌ಗಳಲ್ಲಿ ಕೆಲಸ ಮಾಡುವ ಜನರು ಹಿಂದೆ ಮುಂದೆ ನೋಡುವಂತಾಗಿದೆ. ಭಾರತದಲ್ಲಿ 8000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮೀಶೋ, ಓಲಾ, ಅನ್ ಅಕಾಡೆಮಿ ಮತ್ತು ಇತರ ಸ್ಟಾರ್ಟ್‌ ಅಪ್‌ ಗಳು ವಜಾಗೊಳಿಸಿವೆ.

ಕಂಪನಿಯು ಹಲವಾರು ಉದ್ಯೋಗಿಗಳನ್ನು ತೆಗೆದುಹಾಕುವುದರ ಹಿಂದಿನ ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ ಆದರೆ ಇದು ಪ್ರತಿ ವರ್ಷ ನಡೆಯುವ ಸಾಮಾನ್ಯ ಕಾರ್ಯಕ್ಷಮತೆ ಆಧಾರಿಸಿ ಮಾಡಿದ ವಜಾ ಎಂದು ಹೇಳಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇನ್ನೂ ಕೆಲ ಕಾಲ ಭಾರತದಲ್ಲಿ ಉದ್ಯೋಗಿಗಳ ವಜಾ ಮುಂದುವರೆಯಲಿದೆ ಎಂದು ವರದಿಗಳು ತಿಳಿಸಿವೆ. ಕಂಪನಿಗಳಿಂದ ವಜಾಗೊಳಿಸಿದ ಹೆಚ್ಚಿನ ಉದ್ಯೋಗಿಗಳು ಯಾವುದೇ ಮುನ್ಸೂಚನೆಯಿಲ್ಲದೆ ತಮ್ಮನ್ನು ತೊರೆಯುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಅನ್ ಅಕಾಡೆಮಿ, ಕಾರ್ಸ್ 24, ವೇದಾಂತು, ಮೀಶೋ, ಟ್ರೆಲ್, ಫರ್ಲೆಂಕೊ ಸೇರಿದಂತೆ ಭಾರತದಲ್ಲಿನ ಕೆಲವು ಜನಪ್ರಿಯ ಸ್ಟಾರ್ಟ್ ಅಪ್‌ ಗಳು 5000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ತೊರೆದಿವೆ. 

ಓಲಾ 2022 ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 2100 ಉದ್ಯೋಗಿಗಳನ್ನು ವಜಾಗೊಳಿಸಿದೆ. 926 ಉದ್ಯೋಗಿಗಳನ್ನು ಅನ್ ಅಕಾಡೆಮಿ ವಜಾ ಮಾಡಿದ್ದು, ವೇದಾಂಟು 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಾರ್ಸ್ 24 ಸುಮಾರು 600 ಉದ್ಯೋಗಿಗಳನ್ನು ಕೈಬಿಟ್ಟಿದೆ. 

Leave a Reply

error: Content is protected !!
Scroll to Top
%d bloggers like this: