ಉಡುಪಿ: ವಿವಾಹಿತ ಮುಸ್ಲಿಮನ ಪ್ರೀತಿಗೆ ಬಿದ್ದ ಹಿಂದೂ ಯುವತಿಯ ದುರಂತ ಅಂತ್ಯ!! ವಿಟ್ಲದ ಪ್ರಕರಣ ಮಾಸುವ ಮುನ್ನವೇ ನಡೆಯಿತು ಇನ್ನೊಂದು ‘ಆತ್ಮಹತ್ಯೆ ಪ್ರಚೋದನೆ’!!

ಉಡುಪಿ: ಉಡುಪಿಯಲ್ಲಿ ಮತ್ತೆ ಲವ್ ಆಂಡ್ ಸೆಕ್ಸ್ ಜಿಹಾದ್ ಒಂದು ನರಬಲಿ ಬೇಡಿದೆ. ಲವ್ ಜಿಹಾದ್ ಗೆ ಒಂದು ಬದುಕಿ ಬಾಳಬೇಕಾದ ಹುಡುಗಿ ಇಲಿಪಾಷಣ ತಿಂದು ಮಲಗಿದ್ದಾಳೆ. ದುರಂತವೆಂದರೆ ಆ ಹುಡುಗಿಯ ಸಾವಿಗೆ ಲವ್ ಜಿಹಾದ್ ಮಾಡಿ ಸಾಯಿಸಿದ ಆತ ಎಷ್ಟರ ಮಟ್ಟಿಗೆ ಕಾರಣವೋ, ಅಷ್ಟೇ ಕಾರಣ ಆಕೆಯ ಜವಾಬ್ದಾರಿ ಇಲ್ಲದ ಹಡಬೆ ಪೋಷಕರು !

ಸೆಕ್ಸ್ ಜಿಹಾದ್ !
ಕಳೆದ ಎರಡು ದಿನಗಳ ಹಿಂದೆ ಇಲಿಪಾಷಣ ಸೇವಿಸಿದ್ದ ಯುವತಿಯೊಬ್ಬಳು ಮೇ 25ರ ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸಾವಿನ ಬಳಿಕ ಘಟನೆಗೆ ಲವ್ ಸೆಕ್ಸ್ ಜಿಹಾದ್ ಕಾರಣವೆಂಬ ಸುದ್ದಿ ಇದೀಗ ಕನ್ಫರ್ಮ್ ಆಗುತ್ತಿದೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಸ್ಲಿಂ ದಂಪತಿಗಳು ಪ್ರೇರಣೆ ನೀಡಿದ್ದರು ಎನ್ನುವ ವಿಷಯ ಬಹಿರಂಗವಾಗುತ್ತಿದ್ದಂತೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮೊನ್ನೆ ತಾನೇ ವಿಟ್ಲದಲ್ಲಿ ನಡೆದ ಪ್ರಕರಣವೊಂದು ಮಾಸುವ ಮುನ್ನವೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಂತಾಗಿದೆ. ಅತ್ತ ಹಿಂದೂಪರ ಸಂಘಟನೆಗಳು ಪ್ರಪಂಚ ಅರಿಯದ ಮಕ್ಕಳ ಪ್ರಾಣ ಉಳಿಸಲು ರಾತ್ರಿ-ಹಗಲು ಕಷ್ಟಪಡುತ್ತಿದ್ದಾರೆ. ಆದರೆ ಬೇಜವಾಬ್ದಾರಿಯ ಬದುಕಿದ್ದೂ ಸತ್ತಂತೆ ಇರುವ ಕೆಲ ಪೋಷಕರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಪೋಷಕರೇ ತಮ್ಮ ಮಕ್ಕಳ ಬಾಳಿಗೆ ಕೊಳ್ಳಿ ಇಡುತ್ತಿರುವುದು ವಿಷಾದನೀಯ !


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಘಟನೆ ವಿವರ: ಮೃತ ಯುವತಿ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ(25) ತನ್ನ ಹತ್ತನೇ ತರಗತಿಯ ಬಳಿಕ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಾ ಖಾಸಗಿ ಸಂಸ್ಥೆಯೊಂದರಲ್ಲಿ ಓದು ಮುಂದುವರಿಸಿದ್ದಳು. ಈ ಸಮಯದಲ್ಲಿ ಆಕೆಗೆ ಕೋಟೇಶ್ವರದ ನಿವಾಸಿ ವಿವಾಹಿತ ಅಝೀಜ್ ಎಂಬಾತನ ಪರಿಚಯವಾಗಿದ್ದು, ಬಳಿಕ ಪ್ರೇಮಕ್ಕೆ ತಿರುಗಿದೆ. ಈ ವಿಚಾರ ಅಝೀಜ್ ನ ಪತ್ನಿಯ ಗಮನಕ್ಕೆ ಬಂದಿದ್ದು ಆಕೆಯೂ ಇವರ ಪ್ರೀತಿಗೆ ಆಕ್ಷೇಪ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಹಲವಾರು ಬಾರಿ ಶಿಲ್ಪಾ ಅಝೀಜ್ ನ ಮನೆಗೂ ತೆರಳಿದ್ದಳು.

ಹೀಗೆ ಮುಂದುವರಿದ ಅವರಿಬ್ಬರ ಪ್ರೀತಿಯಲ್ಲಿ ಲೈಂಗಿಕ ಸಂಪರ್ಕಕ್ಕೂ ಅವಕಾಶ ಸಿಕ್ಕಿದ್ದು, ಅಝೀಜ್ ಒಂದೆರಡು ಬಾರಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ.ಆದರೆ ಇತ್ತೀಚೆಗೆ ಯುವತಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಬಂದಿದ್ದ ಅಝೀಜ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿ, ಅವಾಚ್ಯವಾಗಿ ನಿಂದಿಸಿದ್ದ. ಇದರಿಂದ ನೊಂದ ಯುವತಿ ವಿಷ ಸೇವಿಸಿದ್ದು, ಆಕೆಯ ಸಾವಿನ ಬಳಿಕ ಮುಚ್ಚುಮರೆಯಲ್ಲಿ ನಡೆದಿದ್ದ ಎಲ್ಲಾ ಅಂಶಗಳೂ ಹೊರಬಿದ್ದಿದೆ.

ಮೃತ ಯುವತಿ ಶಿಲ್ಪಾಳ ಸಹೋದರ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಸಹೋದರಿಯ ಸಾವಿಗೆ ಕೋಟೇಶ್ವರದ ಅಝೀಜ್ (32) ಹಾಗೂ ಆತನ ಪತ್ನಿ ಸಲ್ಮಾ ನೇರ ಕಾರಣ ಎಂದು ದೂರಲಾಗಿದೆ. ಸದ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹುಡುಗಿಯ ಮನೆಯಲ್ಲಿ ಇವತ್ತು ಸ್ಮಶಾನ ಮೌನ. ಆದರೆ ಅದಕ್ಕೆ ಕಾರಣ ಮನೆಯವರೇ ಎನ್ನುವುದು ಮಾತ್ರ ಒಪ್ಪಿಕೊಳ್ಳಲೇ ಬೇಕಾದ ಸತ್ಯ

Leave a Reply

error: Content is protected !!
Scroll to Top
%d bloggers like this: