ಆಂಟಿ ಪ್ರೀತ್ಸೆ ! ವಿಧವೆ ಮೋಹಕ್ಕೆ ಸಿಲುಕಿ, ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯ ಪಾಲಿಗೆ ವಿಲನ್ ಆದ ಪಾಪಿ ಗಂಡ

ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆಕೆಗೆ ದೈಹಿಕ ನ್ಯೂನ್ಯತೆ ಇದ್ದರೂ ಹುಡುಗ ಅದನ್ನು ಲೆಕ್ಕಿಸದೇ, ಪ್ರೀತಿ ಮಾಡಿದ. ಹುಡುಗಿಗೆ ಆಕೆಯ ಪೋಷಕರು ಮದುವೆಯಾಗಬೇಡ, ಆತ ಸರಿಯಿಲ್ಲ ಎಂದರೂ ಪಟ್ಟು ಬಿಡದೇ ಮದುವೆಯಾಗಿದ್ದಳು. ಇವರಿಬ್ಬರ ಸಂಸಾರಕ್ಕೆ ಸಾಕ್ಷಿ ಎಂಬಂತೆ ಮಕ್ಕಳೂ ಆದವು. ಆದರೆ ಅನಂತರ ಇವರ ಲೈಫಿನಲ್ಲಿ ಎಂಟ್ರಿ ಕೊಟ್ಟಳು ಆಂಟಿ. ನಂತರ ನಡೆದದ್ದೇ ದುರಂತ.

ನಗರದ ವಿವೇಕಾನಂದ ರಸ್ತೆಯ ಕೊಳಚೆ ಪ್ರದೇಶದ ನಿವಾಸಿಯಾಗಿರೋ ಉಮಾ, ಅದೇ ಏರಿಯಾದಲ್ಲಿ ವಾಸವಾಗಿದ್ದ ಸಾಗರ್ ಕೊಪ್ಪಳ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಸದ್ಯ ಆಂಟಿ ವ್ಯಾಮೋಹಕ್ಕೆ ಸಿಲುಕಿರುವ ಸಾಗರ್, ಆಕೆಯ ಹಿಂದೆ ಓಡಾಡುತ್ತಿದ್ದು ಕಟ್ಟಿಕೊಂಡ ಹೆಂಡತಿಗೆ ಚಿತ್ರ ಹಿಂಸೆ ನೀಡುತ್ತಿರುವುದಾಗಿ ಆರೋಪಿಸಲಾಗಿದೆ. ಕುಡಿದ ಅಮಲಿನಲ್ಲಿ ರಾತ್ರಿ ಮನೆಗೆ ಬಂದು ಕಾಲಿನಿಂದ ತುಳಿದು ಸಾಗರ್ ಕೀಚಕನಂತೆ ವರ್ತಿಸುತ್ತಿದ್ದು, ಇದರಿಂದ ಬೇಸತ್ತಿರೋ ಉಮಾ ತವರು ಮನೆ ಸೇರಿದ್ದಾಳೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಶಾಲಾ ದಿನಗಳಿಂದಳೂ ಉಮಾ ಅವರಿಗೆ ಕಿರಿಕಿರಿ ಮಾಡ್ತಿದ್ದ ಸಾಗರ್ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ. ಪೋಷಕರ ಸಮ್ಮುಖದಲ್ಲೇ ಉಮಾ 2017ರಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡ್ಕೊಂಡಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ಸಾಗರ್, ವರ್ಷದಲ್ಲೇ ವರಸೆ ಬದಲಿಸಿದ್ದ. ಉಮಾ ಸಾಗರ್‌ಗೆ ಎರಡು ಮುದ್ದಾದ ಹೆಣ್ಣು ಮಕ್ಕಳಿವೆ. ಸದ್ಯ ಉಮಾ ತುಂಬು ಗರ್ಭಿಣಿ. ಹೀಗಿದ್ರೂ ಸಾಗರ್ ಉಮಾಳಿಗೆ ಚಿತ್ರ ಹಿಂಸೆ ನೀಡಿದ್ದಾನೆ. ನೀನು ಚೆನ್ನಾಗಿಲ್ಲ, ಎಂದು ಕಿರಿಕ್ ತೆಗೆದು 45 ಆಸು ಪಾಸಿನ ಆಂಟಿಯ ವ್ಯಾಮೋಹಕ್ಕೆ ಸಿಲುಕಿದ್ದಾನೆ.

ಅಂದ್ದಾಗೆ, ಉಮಾಗೆ ಶ್ರವಣ ದೋಷ ಇದೆ. ಚಿಕ್ಕಂದಿನಲ್ಲಿ ಕಿವಿಗೆ ಪೆನ್ ಹಾಕಿಕೊಂಡಿದರಿಂದ ಶ್ರವಣ ಶಕ್ತಿ ಕಡಿಮೆಯಾಗಿದೆ. ಹೀಗಿದ್ರೂ ಸಾಗರ್, ಉಮಾಳನ್ನ ಪ್ರೀತಿಸಿ ಮದ್ದೆಯಾಗಿದ್ದ. ಆರಂಭದಲ್ಲಿ ಸೀದಾ ಸಾದಾ ಆಗಿದ್ದ ಸಾಗರ್ ಕ್ರಮೇಣ ಬದಲಾಗಿದ್ದಾನೆ. ನಿನ್ನ ಜೊತೆ ಮಾತನಾಡುವುದಕ್ಕೆ ಕಿರಿಕಿಯಾಗುತ್ತೆ ಎಂದು ತಗಾದೆ ತೆಗೀದಿದ್ದಾನೆ. ಇತ್ತೀಚೆಗೆ ವಿಧವೆ ಮಹಿಳೆಯೊಬ್ಬಳ ಸ್ನೇಹ ಬೆಳಸಿರೋ ಸಾಗರ್, ಉಮಾಳಿಗೆ ಚಿತ್ರ ಹಿಂಸೆ ನೀಡ್ತಿದ್ದಾನೆ. ಹೀಗಾಗಿ ನನಗೆ ನ್ಯಾಯ ಕೊಡ್ಸಿ. ಎರಡು ಹೆಣ್ಣು ಮಕ್ಕಳನ್ನ ಸಾಕುವ ಜವಾಬ್ದಾರಿ ನನ್ನ ಮೇಲಿದೆ, ಸಹಾಯ ಮಾಡಿ ಎಂದು ಉಮಾ ಅಳಲು ತೋಡಿಕೊಂಡಿದ್ದಾರೆ.

ಕೌಟುಂಬಿಕ ಕಿರಿಕಿರಿ ಆರಂಭವಾದಾಗ ಉಮಾ ತಂದೆ ಜಗದೀಶ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾಜೀವ ಗಾಂಧಿ ಪೊಲೀಸ್ ಸ್ಟೇಷನ್ ಗೆ ಕರೆಸಿ ಸಾಗರ್ ಗೆ ಬುದ್ಧಿ ಹೇಳಲಾಗಿತ್ತು. ಹೀಗಿದ್ರೂ ಸಾಗರ ಬುದ್ಧಿ ಕಲಿತಿರಲಿಲ್ಲ. ಸಾಗರ್ ಈಗ್ಲೂ ಮಹಿಳೆಯನ್ನ ಕರೆದುಕೊಂಡು ಊರು ಅಲೆಯುತ್ತಿದ್ದು, ವಿಷಯ ಹೆಂಡತಿಗೆ ತಿಳಿದಾಗಿನಿಂದ ಮನೆಯಲ್ಲಿ ನೆಮ್ಮದಿಯಾಗಿ ಇರೋದಕ್ಕೂ ಬಿಡುತ್ತಿಲ್ಲ ಎಂದು ತಿಳಿದುಬಂದಿದೆ.

ಉಮಾ ತಂದೆ, ಜಗದೀಶ್ ವೃತ್ತಿಯಿಂದ ಟ್ರಕ್ ಡ್ರೈವರ್. ಸುಮಾರು 25 ವರ್ಷಗಳ ಹಿಂದೆ ರಂಗವ್ವ ಅನ್ನೋರನ್ನ ಮದ್ವಯಾಗಿದ್ರು. ಜಾತಿ ಬೇರೆಯಾಗಿದ್ರೂ ಇಬ್ಬರ ಮನಸ್ಸು ಒಂದಾಗಿತ್ತು. ಈಗೂ ಇಬ್ಬರು ಅನ್ಯೋನ್ಯ ವಾಗಿದ್ದಾರೆ. ಗಂಡ ಹೆಂಡತಿ ಅಂದ್ರೆ ಹೀಗಿರಬೇಕು ಅನ್ನೋ ಮಟ್ಟಿಗೆ ಇಬ್ಬರು ಜೀವನ ನಡೆಸುತ್ತಿದ್ದಾರೆ.

ಜೀವನ ಅಂದ್ರೆ ಪ್ರೀತಿ ಅಂತಾ ಬದುಕಿರೋ ಕುಟುಂಬ ಅದು. ಮಗಳ ಪ್ರೀತಿ ವಿಷಯ ಕೇಳಿ, ಸಾಗರ್ ಹಿನ್ನೆಲೆ ಕೆದಕಿದಾಗ ಆತ ಉಂಡಾಡಿ ಗುಂಡನಂತೆ ಓಡಾಡುತ್ತಿದ್ದ ಸುದ್ದಿ ಕಿವಿಗೆ ಬಿತ್ತು. ಸಾಗರ್ ನಿನಗೆ ಸರಿಯಾದ ಜೋಡಿ ಅಲ್ಲ ಅಂತಾ ಬುದ್ಧಿ ಹೇಳಿದ್ರೂ ಉಮಾ ಕೇಳಿರಲಿಲ್ಲ. ಒತ್ತಾಯಕ್ಕೆ ಮಣಿದು ಸಾಗರ್‌ನ ಮದ್ವಯಾಗೋದಕ್ಕೆ ಸಮ್ಮತಿ ಸೂಚಿಸಿದ್ದರು. ಸದ್ಯ ಮದುವೆಯಾಗಿದ್ದಕ್ಕೆ ಉಮಾ ಪರಿತಪಿಸುತ್ತಿದ್ದಾರೆ. ಸದ್ಯ ಉಮಾ ತವರು ಮನೆಯಲ್ಲೇ ವಾಸವಾಗಿದ್ದಾರೆ. .

Leave a Reply

error: Content is protected !!
Scroll to Top
%d bloggers like this: