ಆಕಾಶವಾಣಿಯಲ್ಲಿ ವಿವಿಧ ಹುದ್ದೆ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಕೆಗೆ ಜೂ.10 ಕೊನೆಯ ದಿನಾಂಕ

ಆಕಾಶವಾಣಿ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ : ಸಾಂದರ್ಭಿಕ ಸುದ್ದಿ ಸಂಪಾದಕರು/ ವರದಿಗಾರರು ಹಾಗೂ ಸಾಂಧರ್ಭಿಕ ಸುದ್ದಿ ವಾಚಕರು ಅನುವಾದಕಾರರನ್ನು ನೇಮಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸಾಂದರ್ಭಿಕ ಸುದ್ದಿ ಸಂಪಾದಕರು/ವರದಿಗಾರರ ಹುದ್ದೆಗೆ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು, ಪದವಿ ಅಥವಾ ಪತ್ರಿಕೋದ್ಯಮ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕನಿಷ್ಟ 1 ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಪಡೆದಿರಬೇಕು ಅಥವಾ ಮುದ್ರಣ/ವಿದ್ಯುನ್ಮಾನ ಮಾಧ್ಯಮದಲ್ಲಿ ವರದಿಗಾರಿಕೆ/ ಸಂಪಾದಕತ್ವ ಕೆಲಸದಲ್ಲಿ 5 ವರ್ಷ ಅನುಭವವಿರಬೇಕು.

ಕಂಪ್ಯೂಟರ್ ಅಪ್ಲಿಕೇಷನ್ ಪ್ರಾಥಮಿಕ ತಿಳುವಳಿಕೆ, ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಇದ್ದು ವಯಸ್ಸು 21 ರಿಂದ 50 ವರ್ಷದೊಳಗಿರಬೇಕು.

ಸಾಂಧರ್ಭಿಕ ಸುದ್ದಿ ವಾಚಕರು-ಅನುವಾದಕಾರರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು, ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಇರಬೇಕು ಹಾಗೂ ಪ್ರಸಾರಕ್ಕೆ ಯೋಗ್ಯವಾದ ಉತ್ತಮ ಗುಣಮಟ್ಟದ ಧ್ವನಿ ಹೊಂದಿರಬೇಕು. ರೇಡಿಯೋ/ಟಿವಿ ಸುದ್ದಿಮಾಧ್ಯಮ ಕೆಲಸ ಅನುಭವ, ಕಂಪ್ಯೂಟರ್ ಅಪ್ಲಿಕೇಷನ್ ಪ್ರಾಥಮಿಕ ತಿಳುವಳಿಕೆ ಇದ್ದು 21 ರಿಂದ 50 ವರ್ಷ ವಯೋಮಿತಿಯೊಳಗಿರಬೇಕು.

ಅರ್ಜಿ ಶುಲ್ಕ : ಸಾಮಾನ್ಯ ವರ್ಗಕ್ಕೆ ರೂ.300, ಎಸ್‌ಸಿ/ ಎಸ್‌ಟಿ/ಓಬಿಸಿ ರೂ.225 ಇದ್ದು The Station Director, All India Radio, Bengaluru ಇವರ ಹೆಸರಿನಲ್ಲಿ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ಹೇಗೆ ? ಅಭ್ಯರ್ಥಿಯ ಪೂರ್ಣ ವಿವರಗಳು, ಅಗತ್ಯ ದಾಖಲಾತಿಗಳ ಪ್ರತಿಗಳು ಹಾಗೂ ಅರ್ಜಿ ಶುಲ್ಕದ ಬ್ಯಾಂಕ್‌ ಡ್ರಾಫ್‌ಟ್‌ನ್ನು ಒಳಗೊಂಡ ಅರ್ಜಿಗಳನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಖುದ್ದಾಗಿ ಜೂನ್ 10 ರೊಳಗೆ ತಲುಪುವಂತೆ ದಿ ಡೆಪ್ಯುಟಿ ಜನರಲ್, (ಇ) & ಹೆಚ್ಓಓ,Attn: ರೀಜನಲ್ ನ್ಯೂಸ್ ಯುನಿಟ್ ಆಲ್ ಇಂಡಿಯಾ ರೇಡಿಯೋ, ರಾಜ್‌ಭವನ್ ರಸ್ತೆ, ಬೆಂಗಳೂರು 560001 ವಿಳಾಸಕ್ಕೆ ಕಳುಹಿಸಿಕೊಡಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ: The Deputy Director General (E) & HOO) Attn: Regional News Unit, All India Radio, Raj Bhavan

ಹೆಚ್ಚಿನ ಮಾಹಿತಿಗೆ 8317466729, 9448159726, 9482169168 ಹಾಗೂ ದೂ.080 22356344/22373000 ಗೆ ಸಂಪರ್ಕಿಸಬಹುದು

error: Content is protected !!
Scroll to Top
%d bloggers like this: