ರಕ್ಷಿತ್ ಶೆಟ್ಟಿ ಮುಖದ ಮೇಲೆ ಗಾಯಗಳಾಗಿದ್ದು ಏಕೆ ? ಇಲ್ಲಿದೆ ಉತ್ತರ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ವರ್ಷವಿಡೀ ಅಭಿಮಾನಿಗಳಿಗೆ ಹಲವಾರು ಸಿನಿಮಾ ಊಟವನ್ನು ಬಡಿಸಲಿದ್ದಾರೆ. ಸಿಂಪಲ್​ ಸ್ಟಾರ್’ ರಕ್ಷಿತ್​ ಶೆಟ್ಟಿ  ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

ನಿರ್ದೇಶಕ ಹೇಮಂತ್​ ಎಂ. ರಾವ್​ ಆಯಕ್ಷನ್​-ಕಟ್​ ಹೇಳುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಅವರು ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ಪೋಸ್ಟರ್​ಗಳಲ್ಲಿ ಅವರು ಲವರ್ ಬಾಯ್​ ರೀತಿ ಕಾಣಿಸಿಕೊಂಡಿದ್ದರು. ಚಿತ್ರದ ದ್ವಿತೀಯಾರ್ಧದಲ್ಲಿ ರಕ್ಷಿತ್​ ಶೆಟ್ಟಿ ಲುಕ್​ ಹೇಗಿರಲಿದೆ ಎಂಬುದಕ್ಕೆ ಈಗ ಹೊಸ ಪೋಸ್ಟರ್​ ಮೂಲಕ ಉತ್ತರ ಸಿಕ್ಕಿದೆ.

ಈ ಫೋಟೋದಲ್ಲಿ ರಕ್ಷಿತ್ ಮುಖದ ತುಂಬಾ ಗಾಯದ ಕಲೆಯಿದ್ದು ಭೀಭತ್ಸವಾಗಿದೆ. ಫೋಟೋ ನೋಡಿದ ನೆಟ್ಟಿಗರು ಭಯ ವ್ಯಕ್ತಪಡಿಸಿದ್ದಾರೆ.  ಸಿನಿಮಾ ಸಲುವಾಗಿ ರಕ್ಷಿತ್​ ಶೆಟ್ಟಿ ಅವರು ಇತ್ತೀಚೆಗೆ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ.

ಹೊಸ ಪೋಸ್ಟರ್​ ಅನ್ನು ರಕ್ಷಿತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನಿಮ್ಮ ಮನು ಹತ್ತು ವರ್ಷಗಳ ನಂತರ’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ. ಅವರ ಮುಖದ ಮೇಲೆ ಹಳೇ ಗಾಯದ ಗುರುತುಗಳು ಕಾಣಿಸಿಕೊಂಡಿವೆ. ಅಂದರೆ ಕಥೆಯಲ್ಲಿ ಸಾಕಷ್ಟು ಘಟನೆಗಳು ನಡೆದ ಬಳಿಕ ಹೀರೋ ಈ ರೀತಿಯಾಗಿ ಬದಲಾಗುತ್ತಾನೆ ಎಂಬ ಸುಳಿವು ನೀಡಲಾಗಿದೆ. ಈ ಗೆಟಪ್​ಗಾಗಿ ರಕ್ಷಿತ್​ ಶೆಟ್ಟಿ ಅವರು ಅಂದಾಜು 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ.

Leave A Reply