ನನ್ನ ತಂದೆಯನ್ನು ದ್ವೇಷಿಸುತ್ತೇನೆ, ಅಪ್ಪಾ ಎನ್ನಲು ಹೇಸಿಗೆಯಾಗುತ್ತಿದೆ, ನಾನೇ ಸಾಯುತ್ತಿದ್ದೇನೆ – ಡೆತ್ ನೋಟ್ ಬರೆದು SSLC ವಿದ್ಯಾರ್ಥಿನಿ ಆತ್ಮಹತ್ಯೆ

0 11

ತಾಯಿ ಇಲ್ಲದ ಅನಾಥ ಮಕ್ಕಳು ಪಟ್ಟ ವೇದನೆಯ ಘಟನೆ ಇದು. ತಾಯಿ ಸತ್ತ ಮೇಲೆ ತಂದೆಯಿಂದಲೇ ಅಮ್ಮನ ಪ್ರೀತಿ ಬಯಸುವ ಮಕ್ಕಳು ಅತ್ತ ಕಡೆ ತಂದೆಯಿಂದ ಪ್ರೀತಿ ಸಿಗದೇ ಹೋದಾಗ ಬೇಸತ್ತಾಗ ಬಾಲಕಿ ತಗೊಂಡ ದುಡುಕಿನ ನಿರ್ಧಾರ ಇದು.

ತಾಯಿ ತೀರಿಕೊಂಡ ಮೇಲೆ ಪ್ರತಿ ದಿನ ಕುಡಿದು ಬರುತ್ತಿದ್ದ ಕುಡುಕ ಅಪ್ಪ ದಿನನಿತ್ಯವೂ ನೀಡುತ್ತಿರುವ ಕಿರುಕುಳವನ್ನು ಸಹಿಸಲಾಗದೇ ಎಸ್ಎಸ್ಎಲ್‌ಸಿ ಓದುತ್ತಿರುವ ಬಾಲಕಿ ಮನಿಷಾ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ವಲಯದ ಬುಕ್ಕೊನಿಗುಡ ಗ್ರಾಮದಲ್ಲಿ ನಡೆದಿದೆ.

‘ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನೆ. ನಾನು ಅವನನ್ನು ಕೊಲ್ಲಬೇಕು, ಆದರೆ ಅದು ಸಾಧ್ಯವಿಲ್ಲ ಅದಕ್ಕಾಗಿ ನಾನು ಸಾಯುತ್ತಿದ್ದೇನೆ. ಪ್ರತಿದಿನ ಮದ್ಯ ಸೇವಿಸುತ್ತಾನೆ. ಅವನ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಅಮ್ಮ ಬದುಕಿದ್ದಾಗ ಆತ ತುಂಬಾ ಒಳ್ಳೆಯವನಾಗಿದ್ದ. ಆದರೆ ಅಮ್ಮ ಸತ್ತ ಮೇಲೆ ಕುಡುಕನಾದ. ಅವನನ್ನು ಅಪ್ಪಾ ಎಂದು ಕರೆಯಲು ಹೇಸಿಗೆಯಾಗುತ್ತದೆ ಎಂದು ಬಾಲಕಿ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.

Leave A Reply