ರಕ್ಷಿತ್ ಶೆಟ್ಟಿ ಮುಖದ ಮೇಲೆ ಗಾಯಗಳಾಗಿದ್ದು ಏಕೆ ? ಇಲ್ಲಿದೆ ಉತ್ತರ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ವರ್ಷವಿಡೀ ಅಭಿಮಾನಿಗಳಿಗೆ ಹಲವಾರು ಸಿನಿಮಾ ಊಟವನ್ನು ಬಡಿಸಲಿದ್ದಾರೆ. ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.
ನಿರ್ದೇಶಕ ಹೇಮಂತ್ ಎಂ. ರಾವ್ ಆಯಕ್ಷನ್-ಕಟ್ ಹೇಳುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ಪೋಸ್ಟರ್ಗಳಲ್ಲಿ ಅವರು ಲವರ್ ಬಾಯ್ ರೀತಿ ಕಾಣಿಸಿಕೊಂಡಿದ್ದರು. ಚಿತ್ರದ ದ್ವಿತೀಯಾರ್ಧದಲ್ಲಿ ರಕ್ಷಿತ್ ಶೆಟ್ಟಿ ಲುಕ್ ಹೇಗಿರಲಿದೆ ಎಂಬುದಕ್ಕೆ ಈಗ ಹೊಸ ಪೋಸ್ಟರ್ ಮೂಲಕ ಉತ್ತರ ಸಿಕ್ಕಿದೆ.
ಈ ಫೋಟೋದಲ್ಲಿ ರಕ್ಷಿತ್ ಮುಖದ ತುಂಬಾ ಗಾಯದ ಕಲೆಯಿದ್ದು ಭೀಭತ್ಸವಾಗಿದೆ. ಫೋಟೋ ನೋಡಿದ ನೆಟ್ಟಿಗರು ಭಯ ವ್ಯಕ್ತಪಡಿಸಿದ್ದಾರೆ. ಸಿನಿಮಾ ಸಲುವಾಗಿ ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗೆ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ.
ಹೊಸ ಪೋಸ್ಟರ್ ಅನ್ನು ರಕ್ಷಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನಿಮ್ಮ ಮನು ಹತ್ತು ವರ್ಷಗಳ ನಂತರ’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಅವರ ಮುಖದ ಮೇಲೆ ಹಳೇ ಗಾಯದ ಗುರುತುಗಳು ಕಾಣಿಸಿಕೊಂಡಿವೆ. ಅಂದರೆ ಕಥೆಯಲ್ಲಿ ಸಾಕಷ್ಟು ಘಟನೆಗಳು ನಡೆದ ಬಳಿಕ ಹೀರೋ ಈ ರೀತಿಯಾಗಿ ಬದಲಾಗುತ್ತಾನೆ ಎಂಬ ಸುಳಿವು ನೀಡಲಾಗಿದೆ. ಈ ಗೆಟಪ್ಗಾಗಿ ರಕ್ಷಿತ್ ಶೆಟ್ಟಿ ಅವರು ಅಂದಾಜು 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ.