ಆನ್ಲೈನ್ನಲ್ಲಿ ಹಳೆಯ ಹೆಲಿಕಾಪ್ಟರ್ ಖರೀದಿಸಿ, ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ ದಂಪತಿ !
ಯುಎಸ್ ಮೂಲದ ಮೋರಿಸ್ -ಮ್ಯಾಗಿ ಎಂಬ ಪೈಲಟ್ ದಂಪತಿಗಳು ಹಳೆಯ ಹೆಲಿಕಾಪ್ಟರ್ನ್ನು ಫೇಸ್ಬುಕ್ ಮಾರ್ಕೆಟ್ನಲ್ಲಿ ನೋಡಿ ಖರೀದಿ ಮಾಡಿದ ನಂತರ ಪೈಲಟ್ ದಂಪತಿಗಳು ಅದನ್ನು ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ್ದಾರೆ.
ಮೋರಿಸ್ ಪ್ರಕಾರ, ಈ ಹೆಲಿಕಾಪ್ಟರ್ ಮೊದಲು ಜರ್ಮನ್ ಪೊಲೀಸರ ಬಳಿ ಇತ್ತು ಮತ್ತು ಅಲ್ಲಿಂದ ಕೆಲವು ವರ್ಷಗಳ ಕಾಲ ಆಫ್ಘಾನಿಸ್ತಾನದಲ್ಲಿ ಯುಎಸ್ ಪಡೆಗಳೊಂದಿಗೆ ಉಳಿದುಕೊಂಡಿತು ಮತ್ತು 2011 ರಲ್ಲಿ ಯುನೈಟೆಡ್ ಸ್ಟೇಟ್ಸ್ಗೆ ಮರಳಿತು.
ಹೆಲಿಕಾಪ್ಟರ್ನ್ನು ಖರೀದಿಸಿದ ನಂತರ, ಮೋರಿಸ್ ಅದನ್ನು ಕ್ಯಾಂಪರ್ ಆಗಿ ಪರಿವರ್ತಿಸಲು ಸಂಪೂರ್ಣ ನೀಲನಕ್ಷೆಯನ್ನು ಸಿದ್ಧಪಡಿಸಿದರು. ಮೋರಿಸ್ನ ಹೆಂಡತಿ ಮ್ಯಾಗಿ ಕೂಡ ಈ ವಿಷಯವನ್ನು ಇಷ್ಟಪಟ್ಟಿದ್ದಾರೆ ಮತ್ತು ಮೋರಿಸ್ಗೆ ಸಂಪೂರ್ಣವಾಗಿ ಸಹಾಯ ಮಾಡಿದ್ದಾರೆ.
ದಂಪತಿಗಳು ತಮ್ಮ ಹೆಲಿಕಾಪ್ಟರ್ನ್ನು ಮಾರ್ಪಡಿಸುವ ಸಂಪೂರ್ಣ ಪ್ರಕ್ರಿಯೆಯನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಅವರು ಅದನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ.