ಬೊಕೊ ಹರಂ ಉಗ್ರರಿಂದ ನೈಜೀರಿಯಾದಲ್ಲಿ ನರಮೇಧ | ಅಮಾನುಷವಾಗಿ 50 ಜನರ ಭೀಕರ ಹತ್ಯೆ

0 2

ನೈಜೀರಿಯಾ: ಕ್ಯಾಮರೂನ್‌ನ ಗಡಿಯ ಸಮೀಪ ದೇಶದ ಈಶಾನ್ಯ ತುದಿಯಲ್ಲಿರುವ ನೈಜೀರಿಯಾದಲ್ಲಿ ಭಾನುವಾರ ಬೊಕೊ ಹರಾಮ್‌ ಉಗ್ರರು ನಡೆಸಿದ ದಾಳಿಯಿಂದ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇಸ್ಲಾಮಿಕ್ ಸ್ಟೇಟ್ ವೆಸ್ಟ್ ಆಫ್ರಿಕಾ ಪ್ರಾಂತ್ಯದ ಉನ್ನತ ಕಮಾಂಡರ್‌ಗಳನ್ನು ಹತ್ಯೆ ಮಾಡಿದ್ದೇ ಈ ಸೇಡಿಗೆ ಕಾರಣವಾಗಿದ್ದು, ಇದರಿಂದ ಭಯೋತ್ಪಾದಕರು ದಾಳಿ ನಡೆಸಿ ಜನರನ್ನು ಕೊಂದಿದ್ದಾರೆ.

ಅಲ್ಲದೆ, ನೈಜಿರೀಯಾ ಮಿಲಿಟರಿಗೆ ಮಾಹಿತಿಯನ್ನು ನೀಡುತ್ತಿರುವುದಾಗಿ ಆರೋಪಿಸಿ ಬೋಕೋ ಹರಾಂ ಉಗ್ರರು, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ 50 ಮಂದಿ ರೈತರನ್ನು ಹತ್ಯೆಗೈಯುವ ಮೂಲಕ ಭೀಕರ ನರಮೇಧ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಕಟ್ಟಿಗೆಗಳನ್ನು ಸಂಗ್ರಹಿಸಲು ತೆರಳಿದ್ದವರ ಮೇಲೂ ಮಾರಣಾಂತಿಕ ದಾಳಿ ನಡೆಸಿ ವಿಕೃತಿ ಮೆರೆದಿದ್ದಾರೆ.

ಶನಿವಾರ ಮುಂಜಾನೆ ನೈಜೀರಿಯಾದ ದಿಕ್ವಾದ ಮುದು ಗ್ರಾಮದಿಂದ ಭಯೋತ್ಪಾದಕರು ಜನರನ್ನು ವಶಪಡಿಸಿಕೊಂಡಿದ್ದಲ್ಲದೆ ಹತ್ಯೆ ಮಾಡಿದ್ದಾರೆ. ಅವರಿಂದ ಬಚಾವಾಗಲು ಯತ್ನಿಸಿದ ಅನೇಕರಿಗೆ ಗುಂಡು ಹೊಡೆದು ಸಾಯಿಸಿದ್ದಾರೆ ಎಂದು ಮಿಲಿಟಿಯಾ ನಾಯಕ ಬಾಬಕುರಾ ಕೊಲೊ ತಿಳಿಸಿದ್ದಾರೆ.

ಬೋಕೋ ಹರಾಂ ಉಗ್ರರ ದಾಳಿಯಲ್ಲಿ ಗಾಯಗೊಂಡವರ ಸಂಖ್ಯೆ ಅಧಿಕವಾಗಿದ್ದು, ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ವಿವರಿಸಿದೆ. ಮೂಲಗಳ ಪ್ರಕಾರ, ಇವರಿಂದ ಬೇಸತ್ತ ಲಕ್ಷಾಂತರ ಜನರು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಇಲ್ಲಿಯವರೆಗೆ ದಾಳಿಯಿಂದ ಸುಮಾರು 350,000 ಜನರು ಬಲಿಯಾಗಿದ್ದಾರೆ ಎಂದು ತಿಳಿಸಿದೆ.

Leave A Reply