ವಿಶ್ವದಾದ್ಯಂತ ಇಂದು ಸ್ಥಗಿತಗೊಂಡ ಇನ್ಸ್ಟಾಗ್ರಾಮ್!

ನವದೆಹಲಿ: ಇಂದು ವಾಟ್ಸಾಪ್, ಫೇಸ್ಬುಕ್ ಬಳಕೆದಾರರರಿಗಿಂತ ಇನ್ಸ್ಟಾಗ್ರಾಮ್ ಉಪಯೋಗಿಸುವವರೇ ಹೆಚ್ಚು. ಇಂತಹ ಮೆಟಾ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ ಇಂದು ಸ್ಥಗಿತವನ್ನು ಎದುರಿಸುತ್ತಿದೆ ಎಂದು ವರದಿಯಾಗಿದೆ.

ಹೌದು. ಇನ್ಸ್ಟಾಗ್ರಾಮ್ ಕೆಲಸ ಮಾಡುತ್ತಿಲ್ಲ ಎಂದು ಅನೇಕ ಬಳಕೆದಾರರು ಟ್ವಿಟರ್‌ನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಬಳಕೆದಾರರು ಫೀಡ್ ಗಳು ರಿಫ್ರೆಶ್ ಆಗಿಲ್ಲ, ಇತರರು ಅಪ್ಲಿಕೇಶನ್ ಗೆ ಲಾಗಿನ್ ಆಗಲು ಸಾಧ್ಯವಾಗಿಲ್ಲ ಎಂದು ವರದಿ ಮಾಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮೇ 25, ಮಂಗಳವಾರ ಬೆಳಿಗ್ಗೆ 9:45 ರಿಂದ ಸೇವೆ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅನೇಕ ವರದಿಗಳು ಬಂದಿವೆ ಎಂದು ಡೌನ್ ಡಿಟೆಕ್ಟರ್ ದೃಢಪಡಿಸಿದೆ. ಭಾರತದ ಜೈಪುರ, ಲಕ್ನೋ, ಮುಂಬೈ, ಬೆಂಗಳೂರು ಮತ್ತು ಇತರ ಅನೇಕ ನಗರಗಳಿಂದ ಕೂಡ ಈ ಬಗ್ಗೆ ಸಮಸ್ಯೆ ಕೇಳಿ ಬಂದಿದೆ. ಆದರೆ ಇನ್ಸ್ಟಾಗ್ರಾಮ್ ಈ ವಿಷಯವನ್ನು ಇನ್ನೂ ಒಪ್ಪಿಕೊಂಡಿಲ್ಲ ಮತ್ತು ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Leave a Reply

error: Content is protected !!
Scroll to Top
%d bloggers like this: