ಬಿಜೆಪಿ ಎಸ್ ಸಿ/ಎಸ್ ಟಿ ಮುಖಂಡನ ಬರ್ಬರ ಹತ್ಯೆ ಮಾಡಿದ ದುಷ್ಕರ್ಮಿಗಳು !!!

ಮಂಗಳವಾರ ಸಂಜೆ ತಮಿಳುನಾಡು ಬಿಜೆಪಿಯ ಎಸ್‌ಸಿ/ಎಸ್‌ಟಿ ಘಟಕದ ಕೇಂದ್ರ ಜಿಲ್ಲಾ ಅಧ್ಯಕ್ಷ ಬಾಲಚಂದ್ರನ್ ಅವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಚೆನ್ನೈನ ಚಿಂತಾದ್ರಿಪೇಟೆಯಲ್ಲಿ ಮೂವರು ಅಪರಿಚಿತ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಒಂದು ಬೈಕ್‌ನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಬಾಲಚಂದ್ರನ್ ಅವರನ್ನು ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮೂಲಗಳ ಪ್ರಕಾರ, ಬಾಲಚಂದ್ರನ್ ಅವರಿಗೆ ಜೀವ ಬೆದರಿಕೆಯ ಇದ್ದುದ್ದರಿಂದ ರಾಜ್ಯ ಸರ್ಕಾರದಿಂದ ವೈಯಕ್ತಿಕ ಭದ್ರತಾ ಅಧಿಕಾರಿಯ (ಪಿಎಸ್‌ಒ) ರಕ್ಷಣೆಯನ್ನು ಒದಗಿಸಲಾಗಿತ್ತು. ಟೀ ವಿರಾಮಕ್ಕೆಂದು ಪಿಎಸ್ ಒ ಹೋಗಿದ್ದಾಗ ಸಂಜೆ 6 ರಿಂದ 7 ಗಂಟೆ ಸುಮಾರಿಗೆ ಬೀದಿಯಲ್ಲಿಯೇ ಬಾಲಚಂದ್ರನ್ ಅವರ ದಾಳಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಚಂದ್ರನ್ ಅವರನ್ನು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿದ್ದಾರೆ.

ವೈರತ್ವದ ಕಾರಣದಿಂದ ನಡೆದಿರುವ ಕೊಲೆ ಪ್ರಕರಣ ಎನಿಸುತ್ತದೆ. ಪ್ರತ್ಯಕ್ಷದರ್ಶಿಗಳು ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ನಾವು ವಿಶೇಷ ತಂಡವೊಂದನ್ನು ರಚಿಸಲಾಗಿದೆಯೆಂದು ಎಂದು ಚೆನ್ನೈ ಪೊಲೀಸ್ ಆಯುಕ್ತ ಶಂಕರ್ ಜಿವಾಲ್ ತಿಳಿಸಿದ್ದಾರೆ

Leave a Reply

error: Content is protected !!
Scroll to Top
%d bloggers like this: