ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಾಕಾಶ | ಅರ್ಜಿ ಸಲ್ಲಿಕೆಗೆ ಕೊನೆದಿನ-ಜೂನ್​ 2

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ: ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಹುದ್ದೆ: ಹೆಚ್ಚುವರಿ ನಿರ್ದೇಶಕ (ತಾಂತ್ರಿಕ), ಉಪ ನಿರ್ದೇಶಕರು (ತಾಂತ್ರಿಕ)
ಹುದ್ದೆ ಸಂಖ್ಯೆ : 2
ಹುದ್ದೆ ಅವಧಿ : ಹೆಚ್ಚುವರಿ ನಿರ್ದೇಶಕ (ತಾಂತ್ರಿಕ) 5 ವರ್ಷದ ಗುತ್ತಿಗೆ, ಉಪ ನಿರ್ದೇಶಕರು (ತಾಂತ್ರಿಕ) 4 ವರ್ಷದ ಗುತ್ತಿಗೆ ಆಧಾರದ ಮೇಲೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹುದ್ದೆ ವೇತನ:
ಹೆಚ್ಚುವರಿ ನಿರ್ದೇಶಕ (ತಾಂತ್ರಿಕ) 1 ವೇತನ ಮ್ಯಾಟ್ರಿಕ್ಸ್​ನಲ್ಲಿ 13ನೇ ಹಂತ
ಉಪ ನಿರ್ದೇಶಕರು (ತಾಂತ್ರಿಕ) 1 ವೇತನ ಮ್ಯಾಟ್ರಿಕ್ಸ್​ನಲ್ಲಿ 11ನೇ ಹಂತ

ವಯೋಮಿತಿ:
ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಯಮಾನುಸಾರ ಅಭ್ಯರ್ಥಿ ವಯೋಮಿತಿ 55 ಮೀರಿರಬಾರದು.

ವಿದ್ಯಾರ್ಹತೆ:
ಪರಿಮಾಣಾತ್ಮಕ ವಿಜ್ಞಾನ / ನಿರ್ವಹಣೆ / ಸಾರ್ವಜನಿಕ ಆರೋಗ್ಯ / ಕಂಪ್ಯೂಟರ್ ವಿಜ್ಞಾನ ಅಥವಾ ಐಟಿಯಲ್ಲಿ ಸ್ನಾತಕೋತ್ತರ ಪದವಿ. ಅಲ್ಲದೆ, ಸರ್ಕಾರದಲ್ಲಿ ಅಥವಾ ಅದರೊಂದಿಗೆ ಕೆಲಸ ಮಾಡಿದ ಕನಿಷ್ಠ 10 ವರ್ಷಗಳ ಅನುಭವ. ಹಾಗೂ ಆರೋಗ್ಯ / ಸಾಮಾಜಿಕ ವಲಯದಲ್ಲಿ 4-5 ವರ್ಷಗಳ ಅನುಭವ.

ಅನುಭವ:
ಇ-ಆಡಳಿತ ಯೋಜನೆಗಳನ್ನು ವಿನ್ಯಾಸಗೊಳಿಸುವ, ನಿರ್ವಹಿಸುವ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಜವಾಬ್ದಾರಿಗಳು ರಾಷ್ಟ್ರೀಯ ಆರೋಗ್ಯದ ಯೋಜನೆ, ವಿನ್ಯಾಸ, ಅಭಿವೃದ್ಧಿ ಮತ್ತು ಮಾರ್ಪಾಡುಗಳನ್ನು ಒಳಗೊಂಡಿರುತ್ತದೆ. ಪೋರ್ಟಲ್, ಬಹು ಭಾಷೆಗಳಲ್ಲಿ ದೇಶದ ಆರೋಗ್ಯ ಮಾಹಿತಿ ಅಗತ್ಯಗಳನ್ನು ಪರಿಹರಿಸುವ ಸಾಮರ್ಥ್ಯ

ಅರ್ಜಿ ಸಲ್ಲಿಕೆ : ಆಫ್​ ಲೈನ್​

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ: ಮೇ 3, 2022
ಅರ್ಜಿ ಸಲ್ಲಿಕೆಗೆ ಅಂತಿಮ ದಿನ: ಜೂನ್​ 2, 2022

ಪ್ರಮುಖ ಲಿಂಕ್​ಗಳು:
ಅಧಿಕೃತ ವೆಬ್​ಸೈಟ್​: https://main.mohfw.gov.in/

ಸೂಚನೆ:
ಅಭ್ಯರ್ಥಿಗಳು ಎಸಿಆರ್/ಎಪಿಎಆರ್‌ಗಳ ದೃಢೀಕೃತ ಪ್ರತಿಗಳೊಂದಿಗೆ ನಿಗದಿತ ಪ್ರೋಫಾರ್ಮಾದಲ್ಲಿ ಅರ್ಜಿ ಸಲ್ಲಿಸಬೇಕು. ಲಕೋಟೆ ಮೇಲೆ ಯಾವ ಹುದ್ದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಜೂನ್ 2ಕ್ಕೆ ಮುಂಚೆ ತಲುಪಿಸಬೇಕು.

ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಸಂಸ್ಥೆ ಮತ್ತು
ಕುಟುಂಬ ಕಲ್ಯಾಣ, ಬಾಬಾ ಗಂಗನಾಥ್ ಮಾರ್ಗ, ಮುನಿರ್ಕಾ, ನವದೆಹಲಿ-110067.

Leave a Reply

error: Content is protected !!
Scroll to Top
%d bloggers like this: