ಆರೆಸ್ಸೆಸ್ ವಿರುದ್ಧದ ಪ್ರತಿಭಟನೆಯಲ್ಲಿ ಪಿಎಫ್ಐ ಸಂಘಟನೆಯ ಪುಟ್ಟ ಬಾಲಕನಿಂದ ವಿವಾದಾತ್ಮಕ ಹೇಳಿಕೆ !!| ಬಾಲಕನ ಪ್ರಚೋದನಕಾರಿ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಪಾಪುಲರ್ ಫ್ರಂಟ್ ಆಫ್ ಇಂಡಿಯಾ ದೇಶದಲ್ಲಿಯೇ ಬ್ಯಾನ್ ಆಗಬೇಕು ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದ್ದರೂ, ಇದೀಗ ಪುಟ್ಟ ಬಾಲಕನೊಬ್ಬ ಆರೆಸ್ಸೆಸ್ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಇದೀಗ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ FIR ದಾಖಲಿಸಿ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಪಿಎಫ್ಐ ಪ್ರತಿಭಟನಾ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಪ್ರಚೋದನಕಾರಿ ಘೋಷಣೆಯನ್ನು ಕೂಗುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಚರ್ಚೆಗೆ ಗ್ರಾಸವಾಗಿದೆ.
ಬಾಲಕ ಹೇಳಿದ್ದೇನು ??
‘ನೀವು ಯೋಗ್ಯ ರೀತಿಯಿಂದ ಬದುಕಿದರೆ ನಮ್ಮ ಭೂಮಿಯಲ್ಲಿ ಬದುಕಬಹುದು, ಒಂದು ವೇಳೆ ನೀವು ನ್ಯಾಯವಾಗಿ ಬದುಕದಿದ್ದರೆ ನಮಗೆ ಆಜಾದಿ ಅಂದರೆ ಏನು ಎಂದು ಗೊತ್ತು’. ಈ ರೀತಿ ಬಾಲಕ ಹೇಳುವ ಘೋಷಣೆಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅನೇಕರು ಸಾಥ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಭಾನುವಾರ ನಮಗೆ ಈ ಪ್ರಚೋದನಕಾರಿ ವಿಡಿಯೋ ದೊರಕಿದ್ದು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪಿಎಫ್ಐ ಸಂಘಟನೆ ಪ್ರತಿಕ್ರಿಯಿಸಿ, ‘ಈ ರೀತಿಯ ಘೋಷಣೆಗಳು ಸಂಘಟನೆಯ ನೀತಿಗೆ ವಿರುದ್ಧವಾಗಿದೆ. ಈ ವಿಚಾರವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಅಲಪ್ಪುಳ ಕ್ಯಾಲಿಯಲ್ಲಿ ಕೂಗುವ ಆಯ್ದ ಘೋಷಣೆಗಳಿಗೆ ನಾವು ಅನುಮೋದನೆ ನೀಡಿದ್ದೆವು. ಆರ್ಎಸ್ಎಸ್ ವಿರೋಧಿಸಿ ನಡೆದ ಈ ರಾಲಿಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಾಲಕ ಈ ರೀತಿ ಘೋಷಣೆ ಕೂಗಿರುವುದು ಈಗಷ್ಟೇ ನಮ್ಮ ಗಮನಕ್ಕೆ ಬಂದಿದೆ. ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗುವುದು ಸಂಘಟನೆಯ ನೀತಿಯಲ್ಲ’ ಎಂದು ಪಿಎಫ್ಐ ರಾಜ್ಯ ಕಾರ್ಯದರ್ಶಿ ಸಿ.ಎ.ರವೂಫ್ ಹೇಳಿದ್ದಾರೆ.