ಜಪಾನಿ ಮಗು ಬಾಯಲ್ಲಿ ಹಿಂದಿ ಕೇಳಿ ಖುಷಿಪಟ್ಟ ಪ್ರಧಾನಿ ಮೋದಿ

ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆಯ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಜಪಾನ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದು, ಟೋಕಿಯೋದಲ್ಲಿ ಮೋದಿಯವರಿಗೆ ಸಂಭ್ರಮದ ಸ್ವಾಗತ ನೀಡಲಾಯಿತು.

ಈ ವೇಳೆ ಜಪಾನಿ ಬಾಲಕನೊಬ್ಬ ಭಾರತದ ತ್ರಿವರ್ಣ ಧ್ವಜದ ಫೆಕಾರ್ಡ್ ಹಿಡಿದು, ಮೋದಿ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ್ದು, ಇದರಿಂದ ಮೋದಿಯವರು ಸಂತಸಗೊಂಡರು. ನಂತರ ಮೋದಿಯವರು ಮಕ್ಕಳ ಬಳಿ ತೆರಳಿ, ಕೆಲಕಾಲ ಸಂವಾದ ನಡೆಸಿದರು.

ಜಪಾನಿನ ವಿರುಕ ಎಂಬ ಬಾಲಕ ಹಿಂದಿ ಭಾಷೆಯಲ್ಲಿ “ಜಪಾನ್‌ಗೆ ಸ್ವಾಗತ, ದಯವಿಟ್ಟು ನಿಮ್ಮ ಆಟೋಗ್ರಾಫ್ ಕೊಡಬಹುದೇ ? ಎಂದು ಕೇಳಿದ. ಅವನ ಮಾತು ಕೇಳಿದ ಮೋದಿಯವರು, ವಾಹ್ ! ನೀನು ಎಲ್ಲಿಂದ ಹಿಂದಿ ಕಲಿತೆ? ನಿನಗೆ ಹಿಂದಿ ಚೆನ್ನಾಗಿ ತಿಳಿದಿದೆಯೇ ? ಎಂದು ಪ್ರಶ್ನಿಸಿದರು. ಬಳಿಕ ಸಂತಸಗೊಂಡು ಬಾಲಕ ಹಿಡಿದಿದ್ದ ಪ್ಲೆಕಾರ್ಡ್‌ಗೆ ಆಟೋಗ್ರಾಫ್ ನೀಡಿದರು.

Leave A Reply

Your email address will not be published.