ದುಡ್ಡುಕೊಟ್ಟರಷ್ಟೇ ಇನ್ನು ಮುಂದೆ ವಾಟ್ಸಪ್ ಬಳಕೆ ಸಾಧ್ಯ – ಮೆಟಾ

WhatsApp ಬಳಸಲು ಇನ್ನು ಮುಂದೆ ಪ್ರೀಮಿಯಂ ಸೌಲಭ್ಯವನ್ನು ತರಲು ಮುಂದಾಗಿರುವುದಾಗಿ ವರದಿಯಾಗಿದೆ. ಮೆಟಾ‌ ಕಂಪನಿಯು ಈ ಬಗ್ಗೆ ಸುಳಿವೊಂದನ್ನು ನೀಡಿದೆ.

ಹೌದು, ಗ್ರಾಹಕರೊಂದಿಗೆ ಸಂವಹನ ನಡೆಸಲು WhatsApp ಹೊಸದಾದ ಹಲವು ಪಾವತಿಸಬೇಕಾದ ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತಿದೆ. ಆದರೆ, ಇದರಿಂದ ಸಾಮಾನ್ಯ WhatsApp ಬಳಕೆದಾರರಿಗೆ ಯಾವುದೇ ಬದಲಾವಣೆ ಕಂಡುಬರುವುದಿಲ್ಲ ಎಂದು ಹೇಳಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಇಲ್ಲಿಯವರೆಗೆ ಈ ಆಪ್ ಬಳಸಲು ಅಥವಾ ಇದರ ವೈಶಿಷ್ಟ್ಯಗಳನ್ನು ಪಡೆಯಲು ಬಳಕೆದಾರರು ಯಾವುದೇ ಹಣವನ್ನು ಪಾವತಿಸಬೇಕಾಗಿರಲಿಲ್ಲ. ಆದರೆ, ಇದೀಗ ಹಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು WhatsApp ಬ್ಯುಸಿನೆಸ್ ಅಪ್ಲಿಕೇಷನ್‌ನಲ್ಲಿ ತರುತ್ತಿದ್ದು, ಈ ವೈಶಿಷ್ಟ್ಯಗಳನ್ನು ಬಳಸಿಕೊಳ್ಳಲು ಬಳಕೆದಾರರು ಹಣವನ್ನು ಪಾವತಿಸಬೇಕಾಗುತ್ತದೆ. ಹೀಗೆ ಹಣವನ್ನು ಪಾವತಿಸಿ ಪಡೆಯುವ WhatsApp ಬ್ಯುಸಿನೆಸ್ ಅಪ್ಲಿಕೇಷನ್‌ನಲ್ಲಿ ಹಲವು ಸಾಧನಗಳನ್ನು ಲಿಂಕ್ ಮಾಡಬಹುದಾದ ಹಾಗೂ ಸ್ಟಮ್ ಲಿಂಕ್ಗಳನ್ನು ರಚಿಸುವ ಆಯ್ಕೆಯನ್ನು ಪಡೆಯುವಂತಹ ವೈಶಿಷ್ಟ್ಯ ಇರಲಿವೆ ಎಂದು ವದಂತಿಗಳು ಹೇಳಿವೆ.

ಇದೀಗ ವದಂತಿಗಳಾಗಿ ದೊರೆತಿರುವ ಮಾಹಿತಿಯಂತೆ, WhatsApp ಬ್ಯುಸಿನೆಸ್ ಅಪ್ಲಿಕೇಷನ್‌ನಲ್ಲಿ ಹತ್ತು ಸಾಧನಗಳನ್ನು ಒಮ್ಮೆಲೇ ಲಿಂಕ್ ಮಾಡಬಹುದಾದ ಆಯ್ಕೆಯು ಇರಲಿದೆಯಂತೆ. ಇದರಿಂದ ಒಂದೇ ಬ್ಯುಸಿನೆಸ್ ಅಕೌಂಟ್ ಅನ್ನು ಹತ್ತು ಜನರು ಏಕಕಾಲದಲ್ಲಿ ಬಳಸಬಹುದು ಮತ್ತು ಇದರ ಸಹಾಯದಿಂದ ಹೆಚ್ಚು ಗ್ರಾಹಕರನ್ನು ಸೆಳೆಯಬಹುದು ಎಂದು ಹೇಳಲಾಗಿದೆ. ಇದರ ಜೊತೆಗೆ WhatsApp ಪ್ರೀಮಿಯಂನಲ್ಲಿ ಬಳಕೆದಾರರು URL ಗಳನ್ನು ಸೌಲಭ್ಯವನ್ನು ಸಹ ಪಡೆಯಬಹುದು. ಅಂದರೆ, WhatsApp ಬಳಕೆದಾರರು ತಮ್ಮ ವ್ಯಾಪಾರಕ್ಕಾಗಿ ಸ್ವಂತವಾಗಿ ಕಸ್ಟಮ್ ಲಿಂಕ್ಗಳನ್ನು ರಚಿಸುವ ಆಯ್ಕೆಯನ್ನು ಪಡೆಯುತ್ತಾರೆ. ಈ ಕಸ್ಟಮ್ ಲಿಂಕ್‌ಗಳನ್ನು WhatsApp ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಟ್ ಮಾಡಬಹುದಾದ ಆಯ್ಕೆ ಸಹ ಇರಬಹುದು ಎಂದು ಹೇಳಲಾಗುತ್ತಿದೆ.

WhatsApp ಬ್ಯುಸಿನೆಸ್ ಆಪ್ ಬಳಕೆದಾರರು URL ಅನ್ನು ರಚಿಸಿದಾಗ ಅವರ ವ್ಯವಹಾರಿಕ ಫೋನ್ ಸಂಖ್ಯೆಯನ್ನು ಮರೆಮಾಡುವುದು ಸಾಧ್ಯವಾಗುವುದಿಲ್ಲ. WhatsApp ಬ್ಯುಸಿನೆಸ್ ಆಪ್ ಮೂಲಕ ಸಂಪರ್ಕಿಸಿದಾಗ ಗ್ರಾಹಕರು ಮೊಬೈಲ್ ಸಂಖ್ಯೆಯನ್ನು ನೋಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

error: Content is protected !!
Scroll to Top
%d bloggers like this: