ಶೂಟಿಂಗ್ ವೇಳೆ ಕಾರು ಪಲ್ಟಿ, ಖ್ಯಾತ ನಟಿ ಸಮಂತಾ, ವಿಜಯ್ ದೇವರಕೊಂಡಗೆ ಗಂಭೀರ ಗಾಯ!

ಚಿತ್ರೀಕರಣದ ಸಂದರ್ಭದಲ್ಲಿ ಅವಘಡ ಉಂಟಾಗಿ ಖ್ಯಾತ ನಟಿ ಸಮಂತಾ ರುತ್ ಪ್ರಭು ಹಾಗೂ ನಟ ವಿಜಯ್ ದೇವರಕೊಂಡ ಗಾಯಗೊಂಡಿದ್ದಾರೆ. ‘ಖುಷಿ’ ಸಿನಿಮಾ ಚಿತ್ರೀಕರಣ ಕಾಶ್ಮೀರದಲ್ಲಿ ಭರದಿಂದ ನಡೆಯುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲಿ ಕಾರ್ ಪಲ್ಟಿಯಾಗಿದ್ದು ಕಾರ್ ನಲ್ಲಿದ್ದ ವಿಜಯ್ ದೇವರಕೊಂಡ ಮತ್ತು ಸಮಂತಾ ಗಾಯಗೊಂಡಿದ್ದಾರೆ.

ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಾರ್ ಚೇಸಿಂಗ್ ಆಕ್ಷನ್ ದೃಶ್ಯದ ಚಿತ್ರೀಕರಣ ಜಮ್ಮು ಮತ್ತು ಕಾಶ್ಮೀರದ ಪಹಲ್ ಗಂನಲ್ಲಿ ನಡೆಯುವ ವೇಳೆ ನಿಯಂತ್ರಣ ತಪ್ಪಿದ ಕಾರ್ ಕೊಳಕ್ಕೆ ಬಿದ್ದಿದೆ. ಚಿತ್ರೀಕರಣದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದ ಕಾರಣ ಯಾವುದೇ ದೊಡ್ಡ ಮಟ್ಟದ ಅಪಾಯ ಉಂಟಾಗಿಲ್ಲ. ಕಾರ್ ನೀರಿಗೆ ಬಿದ್ದ ಕೂಡಲೇ ಇಬ್ಬರನ್ನು ರಕ್ಷಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಅವರು ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ.

ವಿಜಯ್ ದೇವರಕೊಂಡ ಅವರ ಆಪ್ತ ಮೂಲವೊಂದು ಹೇಳುವಂತೆ, ‘ಸಮಂತಾ ಮತ್ತು ವಿಜಯ್ ಕಾಶ್ಮೀರದ ಪಹಲ್ಲಾಮ್ ಪ್ರದೇಶದಲ್ಲಿ ಸ್ಟಂಟ್ ಸೀಕ್ವೆನ್ಸ್ ಮಾಡುತ್ತಿದ್ದಾಗ ಗಾಯಗೊಂಡಿದ್ದಾರೆ. ಆ ದೃಶ್ಯದ ಚಿತ್ರೀಕರಣ ತುಂಬಾ ಕಷ್ಟಕರವಾಗಿತ್ತು. ಲಿಡ್ಡರ್ ನದಿಯ ಎರಡೂ ಬದಿಗಳಲ್ಲಿ ಕಟ್ಟಲಾದ ಹಗ್ಗದ ಮೇಲೆ ಇಬ್ಬರೂ ಕಾರನ್ನು ಓಡಿಸಬೇಕಾಗಿತ್ತು. ಆದರೆ ದುರದೃಷ್ಟವಶಾತ್, ವಾಹನವು ಆಳವಾದ ನೀರಿನಲ್ಲಿ ಬಿದ್ದು ಇಬ್ಬರ ಬೆನ್ನಿಗೆ ಗಾಯವಾಗಿದೆ. ಆ ದಿನವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.

Leave a Reply

error: Content is protected !!
Scroll to Top
%d bloggers like this: