ಅಪಘಾತದಲ್ಲಿ ಕಾಂಗ್ರೆಸ್ ಮುಖಂಡ ದುರ್ಮರಣ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯತ್​ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಘಟಕ ಅಧ್ಯಕ್ಷರಾಗಿದ್ದ ಮಂಜುನಾಥ ಬಿ. ಗೌಡ ಕಬ್ಬಿನ್ಮನೆ ಮೃತಪಟ್ಟಿದ್ದಾರೆ.

ಭೀಕರ ಅಪಘಾತದಲ್ಲಿ ಸಾವು ಸಂಭವಿಸಿದೆ. ಮದುವೆ ದಿಬ್ಬಣದ ಜನರನ್ನು ಕರೆದೊಯ್ಯುತ್ತಿದ್ದ ವಾಹನ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಘಟನೆ ಜರುಗಿದೆ.

ಮದುವೆ ಮುಗಿಸಿ ದಿಬ್ಬಣದ ಜನರು ಕಾರಿನಲ್ಲಿ ತೆರಳುತ್ತಿದ್ದರು. ಇದು ಎದುರುಗಡೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Leave A Reply

Your email address will not be published.