ಭಾರತೀಯ ವಾಯು ಸೇನೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 20
ಭಾರತೀಯ ವಾಯು ಸೇನೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ, ಖಾಲಿ ಇರುವ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆಯ ಹೆಸರು : ಇಂಡಿಯನ್ ಏರ್ ಫೋರ್ಸ್ (IAF)
ಹುದ್ದೆಗಳ ಸಂಖ್ಯೆ : 4
ಉದ್ಯೋಗ ಸ್ಥಳ : ದೇಶಾದ್ಯಂತ
ಹುದ್ದೆ ಹೆಸರು : ಲೋವರ್ ಡಿವಿಷನ್ ಕ್ಲರ್ಕ್ (LDC)
ವಿದ್ಯಾರ್ಹತೆ : ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ: ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 28 ನವೆಂಬರ್ 2021ಕ್ಕೆ ಕನಿಷ್ಠ 18 ವರ್ಷಗಳು ಪೂರೈಸಿರಬೇಕು. ಗರಿಷ್ಠ 25 ವರ್ಷಗಳನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಹಿಂದುಳಿದ ಅಭ್ಯರ್ಥಿಗಳು: 03 ವರ್ಷಗಳು
ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳು: 05 ವರ್ಷಗಳು
ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು
ವಿಕಲಚೇತನ (ಪ. ಜಾ/ ಪ. ಪಂ) ಅಭ್ಯರ್ಥಿಗಳು: 15 ವರ್ಷಗಳು
ವಿಕಲಚೇತನ (ಹಿಂದುಳಿದ ವರ್ಗ) ಅಭ್ಯರ್ಥಿಗಳು: 13 ವರ್ಷಗಳು
ವಿಭಾಗೀಯ (ನಗರ) ಅಭ್ಯರ್ಥಿಗಳು: 15 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ದೈಹಿಕ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಕೆ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು.
ಪ್ರಿಸೈಡಿಂಗ್ ಆಫೀಸರ್, ಸಿವಿಲಿಯನ್ ನೇಮಕಾತಿ ಮಂಡಳಿ, ಏರ್ ಫೋರ್ಸ್ ರೆಕಾರ್ಡ್ ಆಫೀಸ್, ಸುಬ್ರೊಟೊ ಪಾರ್ಕ್, ನವದೆಹಲಿ-110010.
ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 21, 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಜೂನ್ 2022
ಅಧಿಕೃತ ವೆಬ್‌ಸೈಟ್: indianairforce.nic.in
ಪ್ರಮುಖ ಸೂಚನೆ:
- ಅಧಿಸೂಚನೆಯಲ್ಲಿ ನೀಡಲಾದ ಫಾರ್ಮ್ಯಾಟ್‌ನ ಪ್ರಕಾರ ಈ ಕೆಳಗಿನ ದಾಖಲೆಗಳೊಂದಿಗೆ ಸರಿಯಾದ ಮಾಹಿತಿ ತುಂಬಿ, ಪೋಸ್ಟ್ ಮೂಲಕ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬೇಕು.
- ಅರ್ಜಿಯ ಜೊತೆಗೆ ಶಿಕ್ಷಣ ಅರ್ಹತೆ, ವಯಸ್ಸು, ತಾಂತ್ರಿಕ ಅರ್ಹತೆ, ದೈಹಿಕವಾಗಿ ಅಂಗವಿಕಲರು, ಅನುಭವ ಪ್ರಮಾಣಪತ್ರ, ಇ ಪ್ರಡಬ್ಲ್ಯೂಎಸ್ ಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳು ಇರಬೇಕು.
- ಜೊತೆಗೆ ಸ್ವಯಂ ದೃಢೀಕೃತ ಜಾತಿ ಪ್ರಮಾಣ ಪತ್ರ ಇರಬೇಕು
- ಇತ್ತೀಚಿನ ಛಾಯಾಚಿತ್ರದೊಂದಿಗೆ (ಪಾಸ್‌ಪೋರ್ಟ್ ಗಾತ್ರ) ಸರಿಯಾಗಿ ಸ್ವಯಂ ದೃಢೀಕರಿಸಿದ ಅರ್ಜಿ ನಮೂನೆಯಲ್ಲಿ ಲಗತ್ತಿಸಬೇಕು.
-ಈ ಅರ್ಜಿಯನ್ನು ಮೇಲ್ಕಂಡ ವಿಳಾಸಕ್ಕೆ 10 ರೂ ಸ್ಟಾಂಪ್ನಲ್ಲಿ ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿಯನ್ನು ರವಾನಿಸಬೇಕು.
-ಅರ್ಜಿದಾರರು ಲಕೋಟೆಯ ಮೇಲೆ ಸ್ಪಷ್ಟವಾಗಿ ನಮೂದಿಸಲು “ಯಾವ ಹುದ್ದೆಗೆ ಅರ್ಜಿ ಮತ್ತು ಯಾವ ವರ್ಗ ಎಂಬುದನ್ನು ನಮೂದಿಸಬೇಕು.