ನನ್ನನ್ನು ಆಕೆ ಬೆತ್ತಲೆ ನೋಡಿದ್ದೇ ಹಾಗಿದ್ದರೆ, ನನ್ನ ಖಾಸಗಿ ಅಂಗದ ಕಲೆಯ, ಅಥವಾ ಗುರುತಿನ ಬಗ್ಗೆ ಉತ್ತರಿಸಲಿ ನೋಡೋಣ: ಎಲಾನ್ ಮಸ್ಕ್ ಡೈರೆಕ್ಟ್ ಚಾಲೆಂಜ್!

ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಮೇಲೆ
ಖಾಸಗಿ ಜೆಟ್ ಒಂದರಲ್ಲಿ ಪ್ರಯಾಣಿಸುವಾಗ ವಿಮಾನದ ಸಹಾಯಕಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪವೊಂದು ಬಂದಿದೆ.

ಎಕ್ಸ್ ಕಾರ್ಪೊರೇಟ್ ಫ್ಲೈಟ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯು ಈ ಆರೋಪ ಮಾಡಿದ್ದಾಳೆ.

ವರದಿಯ ಪ್ರಕಾರ, ಮಸ್ಕ್ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದು, ಕಾಮ ಪ್ರಚೋದಕ ಮಸಾಜ್ ಮಾಡುವಂತೆ ಹೇಳಿದ್ದಾರೆ ಎಂಬ ಆರೋಪವಿದೆ. ಈ ಮಹಿಳೆಗೆ ಎರಡೂವರೆ ಲಕ್ಷ ಡಾಲರ್ (ಸುಮಾರು 1.95 ಕೋಟಿ ರೂಪಾಯಿ) ನೀಡುವ ಆಮಿಷ ಒಡ್ಡಿ ಬಾಯಿ ಮುಚ್ಚುವಂತೆ ಹೇಳಿರುವುದಾಗಿ ಯುವತಿ ಆರೋಪಿಸಿದ್ದಾರೆ.

ಈ ಕುರಿತು ಆ ಯುವತಿ ತನ್ನ ಸ್ನೇಹಿತೆಯ ಬಳಿ ಇದನ್ನು ಹೇಳಿದ್ದಾಳೆ. ಸಂತ್ರಸ್ತೆಯ ಸ್ನೇಹಿತೆ ಇದೀಗ ಇದನ್ನು ಬಹಿರಂಗ ಮಾಡಿದ್ದಾಳೆ. ‘ತಮ್ಮ ಬಟ್ಟೆ ಕಳಚಿದ ಬಳಿಕ ಮಸ್ಕ್ ಅವರು ವಿಮಾನದ ಸಹಾಯಕಿಯ ತೊಡೆಯನ್ನು ಸವರಿದ್ದರು ಮತ್ತು ವಿಮಾನದ ಒಳಗೆ ಮಸಾಜ್ ಮಾಡಲು ಆಕೆಗೆ ಮತ್ತಷ್ಟು ಸಹಕಾರ ನೀಡಿದರೆ ಕುದುರೆ ಖರೀದಿ ಮಾಡುವುದಾಗಿ ಆಫರ್ ನೀಡಿದ್ದರು’ ಎಂದು ಸಂತ್ರಸ್ತೆ ತನ್ನ ಬಳಿ ಹೇಳಿಕೊಂಡಿರುವುದಾಗಿ ಯುವತಿ ಆರೋಪಿಸಿದ್ದಾರೆ.

ಇದೆಲ್ಲಾ ಸುಳ್ಳು ಆರೋಪವಾಗಿದ್ದು, ಟ್ವಿಟರ್ ಸ್ವಾಧೀನಕ್ಕೆ ಅಡ್ಡಿಪಡಿಸಲು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ಸುಮಾರು 3 ಲಕ್ಷ ಕೋಟಿ ರೂ.ಗೆ ಟ್ವಿಟ್ಟರ್ ಖರೀದಿಗೆ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ ಯುವತಿ ವಿನಾಕಾರಣ ತಮ್ಮ ಮೇಲೆ ಆರೋಪ ಮಾಡಿದ್ದರು ಎಂದಿದ್ದಾರೆ ಮಸ್ಕ್.

ಇಷ್ಟು ಮಾತ್ರವಲ್ಲದೇ, ಟ್ವಿಟರ್ ಮೂಲಕ ಸಂತ್ರಸ್ತೆಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ” ನಾನೊಂದು ಚಾಲೆಂಜ್ ಮಾಡುತ್ತೇನೆ. ಅವಳು ನನ್ನನ್ನು ಬೆತ್ತಲೆಯಾಗಿ ನೋಡಿರುವುದಾಗಿ ಹೇಳಿಕೊಂಡಿದ್ದಾಳೆ ಎಂದಾದರೆ, ನನ್ನ ದೇಹದ ಮೇಲೆ ಇರುವ, ಸಾರ್ವಜನಿಕರಿಗೆ ತಿಳಿಯದೇ ಇರುವ ಯಾವುದಾದರೊಂದು ಗುರುತು (ಕಲೆ, ಟ್ಯಾಟೂ) ಬಗ್ಗೆ ಹೇಳಲಿ ನೋಡುವ” ಎಂದಿದ್ದಾರೆ. ಇದನ್ನು ಆಕೆ ಹೇಳಲು ಸಾಧ್ಯವೇ ಇಲ್ಲ ಏಕೆಂದರೆ ಅವಳು ಇಲ್ಲ. ಹೇಳುತ್ತಿರುವ ಘಟನೆ ನಡೆದೇ ಇಲ್ಲ ಎಂದು ಸವಾಲು ಹಾಕಿದ್ದಾರೆ

Leave A Reply

Your email address will not be published.