KPSC ಯಿಂದ 410 ಹುದ್ದೆಗಳಿಗೆ ತಿದ್ದುಪಡಿ ಅಧಿಸೂಚನೆ ಪ್ರಕಟ | ಪೌರಾಡಳಿತ ನಿರ್ದೇಶನಾಲಯದ ವಿವಿಧ ಹುದ್ದೆಗಳು | ತಿದ್ದುಪಡಿ ಅಧಿಸೂಚನೆ ಕುರಿತ ಕಂಪ್ಲೀಟ್ ಡಿಟೇಲ್ಸ್

Share the Article

ಕರ್ನಾಟಕ ಲೋಕಸೇವಾ ಆಯೋಗವು ಪೌರಾಡಳಿತ
ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ | ಪುರಸಭೆ / ಪಟ್ಟಣ ಪಂಚಾಯಿತಿ) ವಿವಿಧ ಹುದ್ದೆಗಳಿಗೆ ಇದೀಗ ತಿದ್ದುಪಡಿ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 410 ಹುದ್ದೆಗಳಿಗೆ ಮಾರ್ಚ್ 19, 2022 ರಂದು ಅಧಿಸೂಚನೆ ಪ್ರಕಟಿಸಿ, ಅರ್ಜಿ ಸ್ವೀಕಾರ ಆರಂಭಿಸಿತ್ತು. ಇದೀಗ ಕೆಲವು ಮಾರ್ಪಾಡುಗಳೊಂದಿಗೆ ತಿದ್ದುಪಡಿ ಅಧಿಸೂಚನೆಯನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದೆ. ಈ ಕುರಿತು ಡೀಟೇಲ್ಸ್ ಅನ್ನು ಈ ಕೆಳಗಿನಂತೆ ನೀಡಲಾಗಿದೆ. ಕೆಪಿಎಸ್‌ಸಿ ಈ ಕೆಳಗಿನ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿತ್ತು.

ಕಿರಿಯ ಆರೋಗ್ಯ ನಿರೀಕ್ಷಕರು 57

ಕಿರಿಯ ಅಭಿಯಂತರರು (ಸಿವಿಲ್) : 89

ಎಲೆಕ್ಟ್ರಿಷಿಯನ್ ಗ್ರೇಡ್-1: 02

ಎಲೆಕ್ಟ್ರಿಷಿಯನ್ ಗ್ರೇಡ್-2: 10

ಕಿರಿಯ ಆರೋಗ್ಯ ನಿರೀಕ್ಷಕರು 57

ಕಿರಿಯ ಅಭಿಯಂತರರು (ಸಿವಿಲ್) 89

ಎಲೆಕ್ಟ್ರಿಷಿಯನ್ ಗ್ರೇಡ್-1: 02

ಎಲೆಕ್ಟ್ರಿಷಿಯನ್ ಗ್ರೇಡ್-2: 10

ನೀರು ಸರಬರಾಜು ಆಪರೇಟರ್ : 89

ಸಹಾಯಕ ಸರಬರಾಜು ಆಪರೇಟರ್ : 163

ಒಟ್ಟು ಹುದ್ದೆಗಳ ಸಂಖ್ಯೆ : 410

ಮೇಲಿನ ಸದರಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಇದೀಗ ವರ್ಗೀಕರಣದ ರೋಸ್ಟರಿನ ಪ್ರಾರಂಭಿಕ ಮತ್ತು
ಕೊನೆಯ ಬಿಂದು ಹಾಗೂ ಅಂಗವಿಕಲ ಸಮತಲ ಮೀಸಲಾತಿಯ ಬಿಂದುವಿನ ಮಾಹಿತಿಯನ್ನು ತಿದ್ದುಪಡಿ
ಬಿಡುಗಡೆ ಮಾಡಿದೆ. ಅದರ ಮಾಹಿತಿಯ
ಟೇಬಲ್‌ಗಳನ್ನು ಈ ಕೆಳಗಿನಂತೆ ಚೆಕ್ ಮಾಡಬಹುದು.

ವಿಶೇಷ ಸೂಚನೆ : ಮೇಲಿನ ಟೇಬಲ್‌ನಲ್ಲಿನ ಮಾಹಿತಿಯಂತೆ, ಕ್ರಮ ಸಂಖ್ಯೆ 01 ರ ಕಿರಿಯ ಅಭಿಯಂತರರು (ಸಿವಿಲ್) ಮತ್ತು 02 ರಲ್ಲಿನ ಕಿರಿಯ ಆರೋಗ್ಯ ನಿರೀಕ್ಷಕರು ಹುದ್ದೆಗಳಲ್ಲಿ ಅಂಗವಿಕಲ ದೃಷ್ಠಿಮಾಂದ್ಯರಿಗೆ ಹುದ್ದೆಗಳನ್ನು ಮೀಸಲಿರಿಸಿರುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ ತಿದ್ದುಪಡಿ ಅಧಿಸೂಚನೆಯಲ್ಲಿ ಹೇಳಿದೆ.

ತಿದ್ದುಪಡಿ ಅಧಿಸೂಚನೆ ಕೇವಲ ಮೀಸಲಾತಿಗೆ ಸಂಬಂಧಿಸಿದ್ದು, ಹುದ್ದೆಗಳ ಸಂಖ್ಯೆ ಹೆಚ್ಚಳವಾಗಲಿ, ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡುವುದಾಗಲಿ, ಇತರೆ
ವಿಷಯಕ್ಕೆ ಸಂಬಂಧಿಸಿದ್ದಲ್ಲ.

ಪೌರಾಡಳಿತ ನಿರ್ದೇಶನಾಲಯದ ವಿವಿಧ ಹುದ್ದೆಗಳ
ನೇಮಕಾತಿ ಸಂಬಂಧಿಸಿದ ಪ್ರಮುಖ ದಿನಾಂಕಗಳು

ಅರ್ಜಿ ಸ್ವೀಕಾರ ಆರಂಭ ದಿನಾಂಕ : 31-03-2022

ಅರ್ಜಿ ಸಲ್ಲಿಸಲು ನೀಡಿದ್ದ ಕೊನೆ ದಿನಾಂಕ : 29-04 2022 ರ ರಾತ್ರಿ 11-45 ಗಂಟೆವರೆಗೆ.

ಅರ್ಜಿ ಸ್ವೀಕಾರ ಆರಂಭ ದಿನಾಂಕ : 31-03-2022

ಅರ್ಜಿ ಸಲ್ಲಿಸಲು ನೀಡಿದ್ದ ಕೊನೆ ದಿನಾಂಕ : 29-04 2022 ರ ರಾತ್ರಿ 11-45 ಗಂಟೆವರೆಗೆ.

ಶುಲ್ಕವನ್ನು ಪಾವತಿಸಲು ನೀಡಿದ್ದ ಕೊನೆ ದಿನಾಂಕ: 30-04-2022

ಕೆಪಿಎಸ್‌ಸಿ ಮೇಲಿನ ಸದರಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply