‘ಖಾಲಿ ಕ್ವಾಟ್ರು ಬಾಟಲ್ ಹಂಗೆ ಲೈಫು’ ಎಂಬ ಸಾಂಗಿಗೆ ಪೈಪೋಟಿ ನೀಡುತ್ತಿದ್ದಾಳೆ ಈಕೆ | ಚಿಕ್ಕಮಗಳೂರಿನ ನಡುರಸ್ತೆಯಲ್ಲೇ ಬಿಯರ್ ಬಾಟಲಿ ಹಿಡಿದು ನೃತ್ಯ ಮಾಡಿದ ಹೆಂಗಸಿನ ದೃಶ್ಯ ವೈರಲ್

‘ಮದ್ಯ’ ಎಂಬುದು ಒಮ್ಮೆ ಮನುಷ್ಯನ ಹೊಟ್ಟೆಯೊಳಗೆ ಹೋದ್ರೆ ಕೇಳೋದೇ ಬೇಡ, ಆತನಿಗೆ ಏನು ಆಗುತ್ತಿದೆ ಎಂಬ ಪರಿವೇ ಇರುವುದಿಲ್ಲ. ಎಲ್ಲೆಂದರಲ್ಲಿ ಬಿದ್ದುಕೊಂಡು, ಕುಣಿದಾಡಿಕೊಂಡು ತಮ್ಮ ಜಗತ್ತಲ್ಲೇ ಮುಳುಗಿರುತ್ತಾರೆ. ಆದ್ರೆ ಈ ಎಣ್ಣೆಯ ನಸೆಯಲ್ಲಿ ತೆಲಾಡೋರಲ್ಲಿ ಗಂಡಸರೇ ಎತ್ತಿದ ಕೈ ಎಂದು ನೀವು ಅನ್ಕೊಂದಿದ್ರೆ ಅದು ತಪ್ಪು. ಯಾಕಂದ್ರೆ ಎಲ್ಲೋ ಒಂದು ಕಡೆಯಿಂದ ‘ನಿಮಗಿಂತ ನಾವೇನು ಕಮ್ಮಿ’ ಎಂದು ಕುಪ್ಪಿ ಹಿಡಿದುಕೊಂಡು ಬರೋ ಹೆಂಗಸರಿಗೇನು ಕಮ್ಮಿಲ್ಲ.

ಹೌದು. ಇದೀಗ ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದ
ಮುಖ್ಯರಸ್ತೆಯಲ್ಲಿ ‘ಟೈಟ್ ರಾಣಿ’ ಒಬ್ಬಳು ಇದ್ದು, ‘ಖಾಲಿ ಕ್ವಾಟ್ರು ಬಾಟಲ್ ಹಂಗೆ ಲೈಫು’ ಅಂದುಕೊಂಡು ಮದ್ಯದ ಬಾಟಲಿಯನ್ನು ತಲೆ ಮೇಲೆ ಹೊತ್ತು ಡಾನ್ಸ್ ಮಾಡುತ್ತಿದ್ದಾಳೆ ಈ ಮಹಾನ್ ಗಿತ್ತಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸೀರೆಯುಟ್ಟ ಮಹಿಳೆ ನಡುರಸ್ತೆಯಲ್ಲಿ ಬಿಯರ್ ಬಾಟಲಿ
ಹೊತ್ತುಕೊಂಡು, ಕೈಗಳ ಸಹಾಯವಿಲ್ಲದೆ ಕುಣಿದು ಕುಪ್ಪಳಿಸಿದ್ದಾಳೆ. ದಾರಿಯಲ್ಲಿ ಸಾಗುವ ಪ್ರಯಾಣಿಕರು ನೋಡುತ್ತಿದ್ದರು ಕ್ಯಾರೇ ಅನ್ನದ ಮಹಿಳೆ ತನ್ನದೇ ಲೋಕದಲ್ಲಿ ಮುಳುಗಿ ನೃತ್ಯ ಮಾಡಿದ್ದಾಳೆ.

ಸದ್ಯ ಈಕೆಯ ಬಿಯರ್ ಬಾಟಲ್ ಬ್ಯಾಲೆನ್ಸಿಂಗ್ ಡ್ಯಾನ್ಸ್ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಎಲ್ಲರೂ ಬಿದ್ದು ಬಿದ್ದು ನಗುವಂತೆ ಆಗಿದೆ.

Leave a Reply

error: Content is protected !!
Scroll to Top
%d bloggers like this: