ಉಡುಪಿ : ದೈವಸ್ಥಾನಕ್ಕೆ ಕನ್ನ ಹಾಕಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ಉಡುಪಿ: ಹಿರೇಬೆಟ್ಟು ದೈವಸ್ಥಾನಕ್ಕೆ ಕನ್ನ ಹಾಕಿದ್ದ ಆರೋಪಿ ಮಣಿಪಾಲ ಪೊಲೀಸರ ಬಲೆಗೆ ಬಿದ್ದಿದ್ದು, ಇದೀಗ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಆರೋಪಿಯನ್ನು ಹಿರೇಬೆಟ್ಟು ಭಾಸ್ಕರ ಶೆಟ್ಟಿ (49)ಎಂದು ಗುರುತಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

10 ದಿನಗಳ ಹಿಂದೆ ಬಾಳಕಟ್ಟು ಬೀಡುಮನೆ ದೈವಸ್ಥಾನಕ್ಕೆ ನುಗ್ಗಿದ ಆರೋಪಿ ಆರತಿ, ಪಂಚಲೋಹದ ಮುಖ, ಹಿತ್ತಾಳೆ ಸಾಮಾಗ್ರಿ, ಘಂಟೆ ಸೇರಿದಂತೆ ಸುಮಾರು 50 ಸಾವಿರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದ.

ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದೀಗ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

error: Content is protected !!
Scroll to Top
%d bloggers like this: