ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲೊಂದು ವಿಸ್ಮಯಕಾರಿ ಘಟನೆ | ಗೋಡಂಬಿ ಆಕಾರದ ಮೊಟ್ಟೆಯಿಟ್ಟು ಜನರನ್ನೇ ಅಚ್ಚರಿಗೊಳಿಸಿದ ಕೋಳಿ

ಬೆಳ್ತಂಗಡಿ: ಈ ಜಗತ್ತೆ ಒಂದು ವಿಸ್ಮಯ. ಅದರಲ್ಲೂ ದಿನದಿಂದ ದಿನಕ್ಕೆ ವಿವಿಧ ರೀತಿಯ ವಿಸ್ಮಯಕಾರಿ ಘಟನೆಗಳು ನಡೆಯುತ್ತಲೇ ಇರುತ್ತದೆ. ಪ್ರಕೃತಿಯು ಪ್ರತಿಯೊಂದು ವಸ್ತುವಿಗೆ ಇಂತಹುದೇ ಆಕಾರ ಎಂಬುದನ್ನು ಸೃಷ್ಟಿಮಾಡಿರುತ್ತದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಬದಲಾವಣೆಗಳು ಆದಾಗ ಜನರನ್ನು ಕುತೂಹಲಕ್ಕೆ ಒಳ ಪಡಿಸುವುದರಲ್ಲಿ ತಪ್ಪಿಲ್ಲ.

ಇದೀಗ ಇಂತಹುದೇ ಒಂದು ವಿಸ್ಮಯಕಾರಿ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ನಡೆದಿದೆ. ಸಾಮಾನ್ಯವಾಗಿ ನಾವೆಲ್ಲರೂ ಕೋಳಿ ಮೊಟ್ಟೆಯನ್ನು ದುಂಡಗೆ ವೃತ್ತಾಕಾರದಲ್ಲಿ ನೋಡಿರುತ್ತೇವೆ. ಆದರೆ ಇಲ್ಲೊಂದು ಕಡೆ ಕೋಳಿಯೊಂದು ಜನರನ್ನು ಆಶ್ಚರ್ಯ ಗೊಳಿಸುವಂತೆ ಮೊಟ್ಟೆಯನ್ನು ಇಟ್ಟಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹೌದು. ಈ ಅಪರೂಪವಾದ ಘಟನೆ ಲಾಯಿಲ ಗ್ರಾಮದ ಬೇಲಾಜೆ ಮನೆಯ ಪ್ರಶಾಂತ್ ಎಂಬವರ ಮನೆಯಲ್ಲಿ ನಡೆದಿದ್ದು, ಸಾಕಿದ್ದ ಕೋಳಿಯೊಂದು ಕಳೆದ ಕೆಲವು ದಿನಗಳಿಂದ ಗೋಡಂಬಿ ಆಕಾರದ ಮೊಟ್ಟೆ ಇಡುತ್ತಿರುವುದು ಕಂಡುಬಂದಿದೆ.

ಸದ್ಯ ಈ ಗೋಡಂಬಿ ಮೊಟ್ಟೆ ಎಲ್ಲೆಡೆ ವೈರಲ್ ಆಗುತ್ತಿದ್ದು, ಮೊಟ್ಟೆ ನೋಡಿದವರೆಲ್ಲಾ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: