ಕಾರವಾರದಲ್ಲಿ ಕಂಡು ಬಂದ ಅತ್ಯಂತ ವಿರಳ ‘ಉದ್ದ ಕಣ್ಣಿನ ಏಡಿ’ !!!

Share the Article

ಏಡಿಯಲ್ಲಿ ಅನೇಕ ವಿಧಗಳಿವೆ. ಸಣ್ಣದು, ದೊಡ್ಡದು ಅಥವಾ ಅತೀ ದೊಡ್ಡ ಏಡಿಗಳಿವೆ. ಆದರೆ ಕಡ್ಡಿಯಂಥ ರಚನೆಯ ತುದಿಯಿರುವ ಕಣ್ಣುಗಳಿರುವ ಏಡಿ ಎಂದಾದರೂ ಕಂಡಿದ್ದೀರಾ? ಹೌದು, ಈಗ ಈ ವಿಚಿತ್ರ ರೂಪದ ಏಡಿ ಕಾರವಾರದಲ್ಲಿ ಕಾಣಸಿಕ್ಕಿದೆ.

ದೇಶದ ಪಶ್ಚಿಮ ಕರಾವಳಿಯಲ್ಲಿ ಅತ್ಯಂತ ವಿರಳವಾಗಿ ಕಾಣಸಿಗುವ ‘ಉದ್ದ ಕಣ್ಣಿನ ಏಡಿ’ಯೊಂದು (ಸ್ಯುಡೊಪೊತಾಲಾಮಸ್ ವಿಜಿಲ್) ತಾಲ್ಲೂಕಿನ ಮಾಜಾಳಿಯಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ.

ಹವಾಯಿ ದ್ವೀಪ, ಕೆಂಪು ಸಮುದ್ರ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾ ದ್ವೀಪ ರಾಷ್ಟ್ರಗಳ ಕಡಲಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.

‘ದೇಶದ ಪೂರ್ವ ಕರಾವಳಿಯಲ್ಲಿ ಬಾಂಗ್ಲಾದೇಶದವರೆಗೂ ಈ ಪ್ರಭೇದದ ಏಡಿಗಳ ವಾಸ್ತವ್ಯವಿದೆ. ಪಶ್ಚಿಮ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಬಹಳ ವಿರಳವಾಗಿ ಸಿಕ್ಕಿರುವ ಉದಾಹರಣೆಗಳಿವೆ. ಸಮುದ್ರದ ಮರಳಿನಲ್ಲಿ ಹೊಂಚು ಹಾಕಿ ಕುಳಿತುಕೊಳ್ಳುವ ಈ ಏಡಿಗೆ ಬೇಟೆಯಾಡಲು ದುರ್ಬೀನಿನಂಥ ಕಣ್ಣುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ’ ಎಂದು ಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಮಾಹಿತಿ ನೀಡಿದರು.

Leave A Reply