ಅಭಿವೃದ್ದಿಯ ನೆಪದಲ್ಲಿ ಮರಗಳನ್ನು ಕತ್ತರಿಸಬೇಡಿ -ವಿಜಯನಗರದ ಪಿಡಿಐಟಿ ಕಾಲೇಜಿನ ಫಾರ್ ದಿ ನೇಚರ್ ತಂಡ

ಹೊಸಪೇಟೆ ಮೇ೧೯: ಅಭಿವೃದ್ಧಿ ನೆಪದಲ್ಲಿ ಮರಗಳ ಮಾರಹೋಮ ನಡೆಸಲು ರೂಪಿಸಿರುವ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಪಿಡಿಐಟಿ ಕಾಲೇಜಿನ ಫಾರ್ ದಿ ನೇಚರ್ ತಂಡ, ಬೇಡ ಜಂಗಮ ಮಹಿಳಾ ಘಟಕದಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಮರಗಳನ್ನು ಕತ್ತರಿಸುವುದನ್ನು ತಡೆಯುವಂತೆ ಆಗ್ರಹಿಸಿದರು. ಪರಿಸರ ದಿನಾಚರಣೆಗೆ ಮಾತ್ರ ಮರ ಉಳಿಸಿ ನಾಡು ಬೆಳೆಸಿ ಎಂದು ಹೇಳುವುದಲ್ಲದೇ ಪರಿಸರದ ಸಂರಕ್ಷಣೆ ಮಾಡುವ ಆಶಯ ಪ್ರತಿಯೊಬ್ಬರಲ್ಲಿ ಇದ್ದಾಗ ಮಾತ್ರ ಪರಿಸರ ಉಳಿವು ಸಾಧ್ಯವಾಗುತ್ತದೆ. ಪ್ರಸ್ತುತ ಆಧುನಿಕತೆಯ ಬರದಲ್ಲಿ ಎಲ್ಲರೂ ಸ್ವಾರ್ಥಿಗಳಾಗುತ್ತಿದ್ದು, ಪರಿಸರ ಕಾಪಾಡುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಅಭಿವೃದ್ಧಿ ಹೆಸರಿನಲ್ಲಿ, ನಮ್ಮ ವೈಯಕ್ತಿಕ ಉದ್ದೇಶಕ್ಕಾಗಿ ಅರಣ್ಯ ನಾಶ ಸೇರಿದಂತೆ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿನ ಮರಗಳ ಮಾರಣ ಹೋಮ ನಡೆಸುತ್ತಿದ್ದೆವೆ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಬಹಳ ತೊಂದರೆ ಯಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.ಮರಗಳಿಲ್ಲವಾದರೆ ವಾತಾವರಣದಲ್ಲಿ ವ್ಯತ್ಯಾಸ ಉಂಟಾಗಿ ಮಳೆ ಕಡಿಮೆ ಆಗುತ್ತದೆ. ಎಂದಿನAತೆ ಮಳೆಯಾಗದೆ ಕೃಷಿಗೆ ತೊಂದರೆಯಾಗುತ್ತದೆ. ಈಗಲೇ ಪ್ರತಿಯೊಬ್ಬರು ಪರಿಸರ ಸಂರಕ್ಷಿಸಲು ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರ ಮನಸ್ಸಿನಲ್ಲೂ ಪರಿಸರ ಸಂರಕ್ಷಣೆ ಕಾಳಜಿ ಮೂಡಬೇಕು. ನಮ್ಮ ಪರಿಸರವನ್ನು ನಾವೇ ಕಾಪಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.ತಾಲೂಕಿನ ಕಮಲಾಪುರದವರೆಗೆ, ನಗರದ ಹೊರವಲಯದ ಇಂಗಳಗಿ ಕ್ರಾಸ್ ವರೆಗೆ ಹಾಗು ನಗರದ ಟಿಬಿಡ್ಯಾಂ ರಸ್ತೆಯಲ್ಲಿನ ಬೃಹತ್ ಮರಗಳು ಸೇರಿ ಒಟ್ಟು ೧೦೨೪ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು. ಇವುಗಳು ಬಹು ವರ್ಷಗಳ ಕಾಲ ಬೆಳೆದು ನಿಂತ ಬೃಹತ್ ಮರಗಳಾಗಿವೆ. ಇವುಗಳನ್ನು ಕಡಿದು ಸಸಿನೆಟ್ಟರೆ ಬೆಳೆಯಬೇಕು ಎಂದರೆ ವರ್ಷಗಳೆ ಕಳೆಯುತ್ತವೆ. ಸಭೆ, ಸಮಾರಂಭಗಳಲ್ಲಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಭಾಷಣಕ್ಕೆ ಸೀಮಿತವಾಗದೇ ಅಭಿವೃದ್ಧಿ ಮಾಡುವ ನೆಪದಲ್ಲಿ ಮರಗಳನ್ನು ಕಡೆಯಬೇಡಿ. ಇದರಿಂದ ಪ್ರಕೃತಿಯ ಉಷ್ಣಾಂಶ ಹೆಚ್ಚುವುದು ಸೇರಿದಂತೆ ಇತರೆ ವಿಕೋಪಕ್ಕೆ ಕಾರಣವಾಗುತ್ತದೆ. ರಸ್ತೆ ಮಾಡಿ ಮರಗಳನ್ನು ಉಳಿಸುವ ಬೇರೆ ಮಾರ್ಗ ನೋಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು. ಪರಿಸರ ವಾದಿಗಳಾದ ಪ್ರಭಾಕರ್, ಎಂ.ಮAಜುನಾಥ, ಶಶಿಧರ್, ಕರಿಬಸವಸ್ವಾಮಿ, ಪ್ರತಿಭಾ ಹಿರೇಮಠ, ಬಿ.ಎಂ.ವೀಣಾ, ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಸ್ ಸೋಲಾಪುರ, ಚಂದ್ರಕಾAತ, ಪ್ರತಾಪ್, ವಿದ್ಯಾಶ್ರೀ ಪಾಟೀಲ್, ಸ್ನೇಹಾ, ಅಮೃತಾ ಪಾಲ್ಗೊಂಡಿದ್ದರು.

Leave a Reply

error: Content is protected !!
Scroll to Top
%d bloggers like this: