ಮಗನನ್ನೇ ಮದುವೆಯಾದ ತಾಯಿ | 20,000 ಹಣದೊಂದಿಗೆ ಪರಾರಿ | ಪತಿಯಿಂದ ದೂರು

Share the Article

ಇದಕ್ಕೇನು ಹೇಳಬೇಕೋ‌ ಗೊತ್ತಿಲ್ಲ‌. ತಾಯಿಯೇ ತನ್ನ ಮಗನನ್ನು ಮದುವೆಯಾಗಿ ಕೊನೆಗೆ ದುಡ್ಡು ತಗೊಂಡು ಪರಾರಿಯಾಗಿರುವ ಘಟನೆ ಇದು. ತಾಯಿ ಮಗನನ್ನು ಮದುವೆಯಾಗುವುದನ್ನೇ ಅರಗಿಸಿಕೊಳ್ಳೋದಕ್ಕೆ ಆಗಲ್ಲ. ಇದು ಸಂಬಂಧಗಳಿಗೆ ಬೆಲೆ ಕೊಡದ ಜನ ಮಾಡೋ ಕೆಲಸ. ಈ ಘಟನೆ ನಿಜಕ್ಕೂ ಶಾಕ್ ತರಿಸಿದೆ.

ಈ ಘಟನೆ ಉತ್ತರಾಖಾಂಡ್ ರಾಜ್ಯದ ಬಜ್ಜುರ್ ನಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಮಗನನ್ನೇ ಮದುವೆಯಾಗಿದ್ದಾಳೆ. ಘಟನೆಯಿಂದ ಆಘಾತಗೊಂಡ ಪತಿ ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ತಮ್ಮ ಪತ್ನಿ ವಿರುದ್ಧ ದೂರು ದಾಖಲಿಸಿದ್ದು, ಪತ್ನಿ ಮಗನನ್ನೇ ಮದುವೆಯಾಗಿದ್ದಲ್ಲದೇ ಮನೆಯಲ್ಲಿದ್ದ 20 ಸಾವಿರ ರೂಪಾಯಿಯನ್ನು ಹೊತ್ತೊಯ್ದಿದ್ದಾಳೆ ಎಂದು ಪತಿ ಇಂದ್ರರಾಜ್ ದೂರಿನಲ್ಲಿ ಹೇಳಿದ್ದಾರೆ. ಅಂದಹಾಗೆ ಪತ್ನಿ ಮದುವೆಯಾದ ಪುತ್ರ ಆಕೆಯ ಮೊದಲ ಪತಿಯ ಮಗ ಎಂದು ತಿಳಿದು ಬಂದಿದೆ.

ಉತ್ತರಾಖಂಡ್‌ನ ಉಧಮ್ ಸಿಂಗ್ ನಗರದ ಬಜ್ಜುರ್‌ನಲ್ಲಿ ಈ ಘಟನೆ ನಡೆದಿದೆ. ಇಂದ್ರರಾಮ್ ಅವರು ಹನ್ನೊಂದು ವರ್ಷಗಳ ಹಿಂದೆ ಬಬ್ಲಿ ಎಂಬಾಕೆಯನ್ನು ವಿವಾಹವಾಗಿದ್ದರು. ಆಕೆ ಇಂದ್ರರಾಮ್‌ನನ್ನು ಮದುವೆಯಾದಾಗ ಆಕೆಯ ಮೊದಲ ಪತಿ ಬಬ್ಲಿಯನ್ನು ಬಿಟ್ಟಿದ್ದಳು. ಮೊದಲ ಪತಿಯೊಂದಿಗೆ ಬಬ್ಲಿಗೆ ಇಬ್ಬರು ಮಕ್ಕಳಿದ್ದರು. ನಂತರ ಇಂದ್ರರಾಮ್ ಜೊತೆಗಿನ ದಾಂಪತ್ಯದಲ್ಲಿ ಇವರಿಗೆ ಮೂವರು ಮಕ್ಕಳಿದ್ದಾರೆ.

ಇಂದ್ರಾರಾಮ್ ದೂರಿನ ಪ್ರಕಾರ, ಬಬ್ಲಿಯ ಮೊದಲ ಪತಿಯ ಮಗ ಇತ್ತೀಚೆಗೆ ಆಗಾಗ ಮನೆಗೆ ಬರಲು ಆರಂಭಿಸಿದ್ದ. ಈಗ ಆತ ಮತ್ತು ನನ್ನ ಪತ್ನಿ ಮದುವೆಯಾಗಿದ್ದು, ಮನೆಯಲ್ಲಿದ್ದ 20,000 ತೆಗೆದುಕೊಂಡು ಪತ್ನಿ ಆತನೊಂದಿಗೆ ಹೊರಟು ಹೋಗಿದ್ದಾಳೆ ಎಂದು ಇಂದ್ರಾರಾಮ್ ದೂರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸುತ್ತಿದ್ದಾರೆ.

Leave A Reply