ಪ್ರಿಯಕರನೊಂದಿಗೆ ಮೋಜು ಮಸ್ತಿ ಮಾಡಲು ಅಮ್ಮನ ಚಿನ್ನವನ್ನೇ ಕದ್ದ ಸ್ವಂತ ಮಗಳು | ತಾಯಿಯಿಂದ ದೂರು ದಾಖಲು- ಖತರ್ನಾಕ್ ಜೋಡಿ ಬಂಧನ!!!

ಬೆಂಗಳೂರು: ಬೇರೆಯವರ ಮನೆಯನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಪ್ಲಾನ್ ಹಾಕುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಮೋಜು ಮಸ್ತಿ ಮಾಡಲು ತನ್ನ ತಾಯಿಯ ಚಿನ್ನವನ್ನೇ ಕದ್ದು ಪ್ರಿಯಕರನಿಗೆ ನೀಡಿದ್ದ, ಖತರ್ನಾಕ್ ಪ್ರೇಯಸಿ ಹಾಗೂ ಪ್ರಿಯಕರ ಪೊಲೀಸ್ ವಶ ಆದ ಘಟನೆ ಅಮೃತಹಳ್ಳಿಯ ಜಕ್ಕೂರು ಲೇಔಟ್ ನಲ್ಲಿ ನಡೆದಿದೆ

ಬಂಧಿತ ಜೋಡಿಯನ್ನು ದೀಪ್ತಿ (24) ಹಾಗೂ ಮದನ್(27) ಎಂದು ಗುರುತಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆರೋಪಿ ದೀಪ್ತಿ ತನ್ನ ಮನೆಯಲ್ಲಿದ್ದ ಚಿನ್ನವನ್ನು
ಒಂದೊಂದಾಗೇ ಕದ್ದು ಬರೋಬ್ಬರಿ 1 ಕೆಜಿ ಚಿನ್ನವನ್ನು
ಪ್ರಿಯಕರನಿಗೆ ನೀಡಿದ್ದಳು. ಇದಾದ ಬಳಿಕ ಕದ್ದ ಚಿನ್ನವನ್ನು
ಪ್ರಿಯಕರನ ಜತೆ ಸೇರಿ ಅಡಮಾನ ಇಟ್ಟು ಹಣ
ಪಡೆದುಕೊಂಡಿದ್ದರು. ಅನುಮಾನಗೊಂಡ ತಾಯಿ, ಚಾಲಾಕಿ ಮಗಳ ವಿರುದ್ಧ ದೂರು ದಾಖಲಿಸಿದ್ದು, ಪ್ರೇಮಿಗಳಿಬ್ಬರ ಕೆಲಸ ಬಯಲಾಗಿ ಅಮೃತಹಳ್ಳಿ ಪೊಲೀಸರು ಇಬ್ಬರನ್ನು
ಬಂಧಿಸಿದ್ದಾರೆ.

ಆರೋಪಿ ದೀಪ್ತಿಗೆ ಮದುವೆಯಾಗಿ ಡಿವೋರ್ಸ್ ಆಗಿದ್ದು,
ಮನೆಯಲ್ಲಿ ಅಮ್ಮ ಮತ್ತು ಮಗಳು ಮಾತ್ರ ವಾಸಿಸುತ್ತಿದ್ದರು.
ಆರೋಪಿ ಮದನ್‌ಗೆ ಈಗಾಗಲೇ ಮದುವೆಯಾಗಿ ಇಬ್ಬರು
ಮಕ್ಕಳಿದ್ದು, ಮದನ್ ಡ್ರೈವಿಂಗ್ ಶಾಲೆಯೊಂದರಲ್ಲಿ ಟ್ರೈನರ್
ಆಗಿ ಕೆಲಸ ಮಾಡುತ್ತಿದ್ದ. ಅದೇ ಶಾಲೆಗೆ ದೀಪ್ತಿ ಡ್ರೈವಿಂಗ್
ಕಲಿಯಲು ಹೋಗಿದ್ದ ವೇಳೆ ಮದನ್ ಜೊತೆ ದೀಪ್ತಿಗೆ
ಪ್ರೇಮಾಂಕುರವಾಗಿದೆ.

ಪ್ರಿಯತಮನಿಗಾಗಿ ಮನೆಯಲ್ಲಿದ್ದ ತಾಯಿಯ ಒಡವೆ
ಎಲ್ಲವನ್ನು ದೀಪ್ತಿ ನೀಡಿದ್ದಳು. ಅಷ್ಟೇ ಅಲ್ಲದೆ ಕಿಲಾಡಿ ಮಗಳು, ಅದೇ ಜಾಗಕ್ಕೆ ರೋಲ್ಡ್ ಗೋಲ್ಡ್ ಚಿನ್ನ ತಂದು ತಾಯಿಯನ್ನು ಯಾಮಾರಿಸಿದ್ದಳು. ಆದರೆ ತಾಯಿಗೆ ಚಿನ್ನದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮಗಳನ್ನು ಪ್ರಶ್ನಿಸಿದ್ದು, ಮನೆಯಲ್ಲೇ ಇಬ್ಬರೇ ಇರುವಾಗ ಕದ್ದವರು ಯಾರು ಎಂಬ ಅನುಮಾನ ಮೂಡಿತ್ತು. ಹೀಗಾಗಿ ಮಗಳ ಮೇಲೆಯೇ ಅನುಮಾನಗೊಂಡಿದ್ದ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಇದೀಗ ವಿಚಾರಣೆ ವೇಳೆ ದೀಪ್ತಿಯ ಅಮರ ಮಧುರ ಪ್ರೇಮ ಬೆಳಕಿಗೆ ಬಂದಿದೆ. ಕದ್ದ ಚಿನ್ನವನ್ನು ಮುತ್ತೂಟ್ ಗೋಲ್ಡ್ ಲೋನ್ ಹಾಗೂ ಮಣಪ್ಪುರಂ ಗೋಲ್ಡ್‌ನಲ್ಲಿ ಅಡಮಾನ ಇಟ್ಟು, ಬಂದ ಹಣದಲ್ಲಿ ಮೋಜು ಮಸ್ತಿ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಕಳುವಾಗಿದ್ದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಮೃತಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

Leave a Reply

error: Content is protected !!
Scroll to Top
%d bloggers like this: