ವೇಗವಾಗಿ ಚಲಿಸುತ್ತಿದ್ದ ಕಾರಿಗೆ ಬಲಿಯಾಯ್ತು ಏಳು ಎಮ್ಮೆಗಳು | ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯ ನಡುವೆಯೇ ಒದ್ದಾಡಿ ಪ್ರಾಣ ಬಿಟ್ಟ ಮೂಕ ಪ್ರಾಣಿಗಳು

0 9

ಶಿವಮೊಗ್ಗ: ಅತಿಯಾದ ವೇಗದಿಂದ ಚಲಿಸುತ್ತಿದ್ದ ಮಾರುತಿ ಬ್ರೆಜ್ಞಾ ಕಾರು ಏಳು ಎಮ್ಮೆಗಳಿಗೆ ಡಿಕ್ಕಿ ಹೊಡೆದು, ಅವುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ನಗರದ ಸಾಗರ ರಸ್ತೆಯ ಗಾಡಿಕೊಪ್ಪ ಚಾನಲ್ ಬಳಿ ನಡೆದಿದೆ.

ಕಾರು, ವಿದ್ಯಾನಗರದಿಂದ ಸಾಗರ ಕಡೆಗೆ ಹೊರಟಿದ್ದು, ಚಾಲಕನ ನಿಯಂತ್ರಣ ತಪ್ಪಿ ಎಮ್ಮೆಗಳಿಗೆ ಗುದ್ದಲ್ಪಟ್ಟಿದೆ. ರಸ್ತೆಯ ನಡುವೆಯೇ ಒದ್ದಾಡಿ 7 ಎಮ್ಮೆಗಳು ಸಾವನ್ನಪ್ಪಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಕಾರು ಚಾಲಕ ಅತೀ ವೇಗವಾಗಿ ಕಾರು ಚಲಾಯಿಸುತ್ತಿದ್ದು, ಚಾಲಕನ ಅಜಾರೂಕತೆಯೇ ಈ ಮೂಕ ಪ್ರಾಣಿಗಳ ಸಾವಿಗೆ ಕಾರಣವಾಗಿದೆ. ಶಿವಮೊಗ್ಗ ನಗರದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave A Reply