“ಜೈ ಹಿಂದೂ ರಾಷ್ಟ್ರ” ಎಂಬ ಹೆಸರಿನಲ್ಲಿ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, ನಟ ಪ್ರಕಾಶ್ ರೈ ಸೇರಿದಂತೆ 16 ಮಂದಿಗೆ ಬೆದರಿಕೆ ಪತ್ರ

‘ಜೈ ಹಿಂದೂ ರಾಷ್ಟ್ರ’ ಎಂಬ ಹೆಸರಿನಲ್ಲಿ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, ನಟ ಪ್ರಕಾಶ್ ರೈ ಸೇರಿದಂತೆ 16 ಮಂದಿಗೆ ಬೆದರಿಕೆ ಪತ್ರ ಬಂದಿರುವ ವಿಷಯ ಬೆಳಕಿಗೆ ಬಂದಿದೆ.

 

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರೋ ಸಾಹಿತಿ ಕುಂ. ವೀರಭದ್ರಪ್ಪ ಅವರಿಗೆ 3ನೇ ಬಾರಿಗೆ ಬೆದರಿಕೆ ಪತ್ರ ಬಂದಿದೆ. ಈ ಹಿಂದೆಯೂ ಭದ್ರಾವತಿಯಿಂದ ಮತ್ತು ಚಿತ್ರದುರ್ಗದಿಂದ ಬೆದರಿಕೆ ಪತ್ರ ಬಂದಿತ್ತು. ಇದೀಗ `ಜೈ ಹಿಂದೂರಾಷ್ಟ್ರ, ಸಹಿಷ್ಣು ಹಿಂದೂ’ ಹೆಸರಿನಲ್ಲಿ 3ನೇ ಬೆದರಿಕೆ ಪತ್ರ ಬಂದಿದೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರಿಗೆ ಬೆದರಿಕೆ ಪತ್ರ ಬಂದಿತ್ತು. ಮೊದಲ ಪತ್ರ ಬಂದಾಗ, ವಿಜಯನಗರ ಎಸ್ಪಿ ಡಾ.ಕೆ.ಅರುಣ್ ಅವರನ್ನು ಭೇಟಿಯಾಗಿ ರಕ್ಷಣೆಗಾಗಿ ಸಾಹಿತಿ ಕುಂವಿ ಮನವಿ ಮಾಡಿದ್ದರು. ಇದೀಗ ಮತ್ತೆ ಬೆದರಿಕೆ ಪತ್ರ ಬಂದಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಮಿಸ್ಟರ್ ಕುಂ. ವೀರಪ್ಪನವರೇ, ನನಗೆ ಪೇಪರ್ ಹುಲಿ ಆಗುವುದಕ್ಕೆ ಇಷ್ಟವಿದ್ದರೇ ಅಥವಾ ಪ್ರಚಾರದ ಗೀಳು ಇದ್ದರೇ, ನಿಮ್ಮ ಮೇಲೆ ನೇರವಾಗಿ ದಾಳಿ ಮಾಡಿ ನಾನೇ ಪೊಲೀಸರಿಗೆ ಸರೆಂಡರ್ ಆಗುತ್ತಿದ್ದೆ. ಆದರೆ ನನಗೆ ನಿಮ್ಮ ಥರ ಪೇಪರ್ ಹುಲಿ, ಸಿಂಹ ಇತ್ಯಾದಿ ಆಗುವ ಅವಶ್ಯಕತೆಯಿಲ್ಲ. ಒಬ್ಬಂಟಿಯಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

Leave A Reply

Your email address will not be published.