ವೀಕೆಂಡ್ ನಲ್ಲಿ ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ ! ಇಂದಿನ ಚಿನ್ನ – ಬೆಳ್ಳಿ ಬೆಲೆ ಎಷ್ಟು ?

ಹೆಣ್ಮಕ್ಕಳಿಗೆ ಚಿನ್ನವೆಂದರೆ ಬಹಳ ಪ್ರೀತಿ. ಗಂಡಸರೂ ಇದರಿಂದ ಹೊರತಾಗಿಲ್ಲ. ಆದರೀಗ ಚಿನ್ನ ಹಾಗೂ ಬೆಳ್ಳಿ ದರ ಹಾವು ಏಣಿಯಾಟದ ತರಹ ಆಗುತ್ತಿದ್ದು, ಚಿನ್ನ ಪ್ರಿಯರನ್ನು ನಿರಾಸೆಗೊಳಿಸಿದೆ. ಶುಭ ಕಾರ್ಯಗಳು ಇರುವುದರಿಂದ ಜನ ಚಿನ್ನ ಖರೀದಿಯನ್ನು ಅನಿವಾರ್ಯವಾಗಿ ಮಾಡುತ್ತಿದ್ದಾರೆ.

ಇಂದು ಮೇ 14 ಶನಿವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಬಂಗಾರದ ಬೆಲೆ 5,067 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿಯೂ 1 ಗ್ರಾಂ (24 ಕ್ಯಾರೆಟ್)ಬಂಗಾರಕ್ಕೆ 5,067 ರೂಪಾಯಿ ನಿಗದಿಯಾಗಿದೆ.


Ad Widget

Ad Widget

Ad Widget

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆಗೆ 46,450 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 50,670 ರೂಪಾಯಿ ದಾಖಲಾಗಿದೆ.

ಇಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ :
ಬೆಂಗಳೂರು : ರೂ.46,450 (22 ಕ್ಯಾರೆಟ್) 50,670 – (24 ಕ್ಯಾರೆಟ್)
ಚೆನ್ನೈ: ರೂ.47,640 (22 ಕ್ಯಾರೆಟ) – ರೂ.51,970 (24ಕ್ಯಾರೆಟ್)
ದಿಲ್ಲಿ: ರೂ.46,750 (22 ಕ್ಯಾರೆಟ್) – ರೂ.51,000 (24 ಕ್ಯಾರೆಟ್
ಹೈದರಾಬಾದ್: ರೂ.46,750 (22 ಕ್ಯಾರೆಟ್) -ರೂ.51,000 (24 ಕ್ಯಾರೆಟ್)
ಕೋಲ್ಕತಾ: ರೂ.46,750 (22 ಕ್ಯಾರೆಟ್) -ರೂ.51,000 (24ಕ್ಯಾರೆಟ್)
ಮಂಗಳೂರು: ರೂ.46,750 (22 ಕ್ಯಾರೆಟ್) – ರೂ.51,000 (24 ಕ್ಯಾರೆಟ್)
ಮುಂಬಯಿ: ರೂ. 46,750 (22ಕ್ಯಾರೆಟ್)-ರೂ.51,000 (24 ಕ್ಯಾರೆಟ್)
ಮೈಸೂರು: ರೂ.46,750 (22 ಕ್ಯಾರೆಟ್) -ರೂ.51,000 (24 ಕ್ಯಾರೆಟ್)

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 58,700 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 63,400 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 63,400 ರೂ. ನಿಗದಿಯಾಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿ ಅನೇಕ ಕಡೆಗಳಲ್ಲಿ ಇಳಿಕೆ ಕಂಡು ಉಳಿದೆಡೆ ಏಕರೂಪ ಬೆಲೆ ಇದೆ.

Leave a Reply

error: Content is protected !!
Scroll to Top
%d bloggers like this: