ಒಳ ಬಟ್ಟೆ ಕಾಣುವಂತಹ ಡ್ರೆಸ್ ಹಾಕಿಕೊಂಡು ರೆಸ್ಟೋರೆಂಟ್ ಗೆ ಬಂದ ಶ್ರುತಿಹಾಸನ್ | ಪಾಪರಾಜಿಗಳ ಮುಂದೆ ಮುಜುಗರಕ್ಕೊಳಗಾಗಿ ಕಾರು ಹತ್ತಿದ ನಟಿ

ನಟ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ದಕ್ಷಿಣ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ತಂದೆಯ ಹೆಸರನ್ನು ಬಳಸದೆ ತನ್ನದೆ ನಟನ ಕೌಶಲ್ಯದಿಂದ, ಗ್ಲ್ಯಾಮರ್ ನಿಂದ ಸಿನಿಮಾ ರಂಗದಲ್ಲಿ ಹೆಸರು ಮಾಡಿದ ನಟಿ. ತಾನು ಮಾಡಿದ ಸಿನಿಮಾ ಇರಬಹುದು, ಪ್ಲಾಸ್ಟಿಕ್ ಸರ್ಜರಿ ಇರಬಹುದು ಅಥವಾ ಗ್ಲ್ಯಾಮರ್ ಮೂಲಕ ಅಭಿಮಾನಿಗಳ ಮನಸ್ಸಲ್ಲಿ ನೆಲೆ ಮಾಡಿದವರು. ಡ್ಯಾನ್ಸ್ ಗೂ ಸೈ, ಹಾಡಿಗೂ ಸೈ ಈ ನಟಿ.

ಇನ್ನು ವೈಯಕ್ತಿಕ ವಿಚಾರದಿಂದಲೂ ಶ್ರುತಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದಕ್ಕೆ ಪೂರಕವಾಗಿ ಒಂದು ಘಟನೆ ನಡೆದಿದೆ. ಇತ್ತೀಚೆಗೆ ಶ್ರುತಿ ತಮ್ಮ ತಾಯಿ ಸಾರಿಕಾ ಠಾಕೂರ್ ಮತ್ತು ಬಾಯ್‌ಫ್ರೆಂಡ್ ಶಾಂತನು ಜೊತೆ ಮುಂಬೈ ಬಾಂದ್ರಾದಲ್ಲಿರುವ ರೆಸ್ಟೋರೆಂಟ್ ಗೆ ಬಂದಿದ್ದರು. ಈ ವೇಳೆ ಶ್ರುತಿ ಅವರು ಧರಿಸಿ ಬಂದಿದ್ದ ಉಡುಗೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಉಡುಗೆ ಪಾರದರ್ಶಕವಾಗಿತ್ತು ಅಷ್ಟು ಮಾತ್ರವಲ್ಲದೇ, ಒಳುಡುಪುಗಳು ಯಾವ ಬಣ್ಣದು ಈಕೆ ಹಾಕಿರುವುದು ಕೂಡಾ ಕಾಣುತ್ತಿದ್ದು, ಅಲ್ಲಿ ನಿಂತಿದ್ದವರ ನೋಟ ಶ್ರುತಿಯ ಮೇಲಿಗಿಂತ, ಆಕೆ ಧರಿಸಿದ ಒಳ ಉಡುಪುಗಳ ಮೇಲಿತ್ತು. ಇದು ಗೊತ್ತಾಗಿಯೋ ಏನೋ ಶ್ರುತಿ ಮುಜುಗರ ಅನುಭವಿಸಬೇಕಾಯಿತು.


Ad Widget

Ad Widget

Ad Widget

ಕೆಲ ಕಾಲ ಅಲ್ಲಿಯೇ ಇದ್ದ ಶ್ರುತಿ ನಂತರ ತಮ್ಮ ಕಾರನ್ನೇರಿ ಹೊರಟರು. ಆದರೆ, ಶ್ರುತಿ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: