ಮೇಲಿಂದ 30 ಅಡಿ ಕೆಳಗೆ ಅರ್ಧಕ್ಕೆ ಕಟ್ ಆಗಿ ನೆಲಕ್ಕಪ್ಪಳಿಸಿದ ವಾಟರ್ ಸ್ಲೈಡ್| ಎದೆ ಝಲ್ಲೆನಿಸುವ ಈ ಭಯಾನಕ ವೀಡಿಯೋ ವೈರಲ್| 3 ಮಂದಿಯ ಮೂಳೆ ಮುರಿತ!

ವಾಟರ್ ಸ್ಲೈಡ್ ಅಂದರೆ ಯಾರಿಗಿಷ್ಟವಿಲ್ಲ…ನೀರಿನ ರಭಸದೊಂದಿಗೆ ಇಳಿಯುತ್ತಾ ತಗೊಳೋ ಮಜಾ ಇದೆಯಲ್ಲಾ ಸೂಪರ್…ಇಂತಹ ಒಂದು ನೀರಿನ ಜಾರುವಿಕೆಯಲ್ಲಿ ಬೀಳುವ ಕ್ಷಣ ಆನಂದದಾಯಕವಾಗಿರುತ್ತದೆ. ಆದರೆ ಇಲ್ಲೊಂದು ಪಾರ್ಕ್ ನಲ್ಲಿ ಈ ನೀರಿನ ಜಾರುವಿಕೆಯ ಭಯಾನಕ ಕ್ಷಣವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲಿ ಬೃಹತ್ ನೀರಿನ ಜಾರುವಿಕೆ ಅರ್ಧಕ್ಕೆ ಕಟ್ ಆಗಿ ನೆಲಕ್ಕೆ ಅಪ್ಪಳಿಸಿದ ದೃಶ್ಯ ಎಂತವರನ್ನೂ ದಿಗಿಲುಗೊಳಿಸುವಂತಿದೆ.

ಮೂಲಗಳ ಪ್ರಕಾರ, ನೀರಿನ ಜಾರುವಿಕೆಯೊಳಗೆ ಇದ್ದವರು, ಒಮ್ಮೆಲೇ ಮೇಲಿನಿಂದ 30 ಅಡಿಗಳಷ್ಟು ನೆಲಕ್ಕೆ ಬಿದ್ದ ದೃಶ್ಯ ಅತ್ಯಂತ ಭಯಾನಕವಾಗಿತ್ತು. ಜೊತೆಗೆ ನೀರಿನ ಸೆಳೆತ. ಇದು ನೋಡುಗರನ್ನು ನಿಜಕ್ಕೂ ದಿಗ್ಭ್ರಮೆಗೊಳಿಸಿದೆ. ಮೇ 7 ರಂದು ನಡೆದ ಈ ಘಟನೆಯ ಭಯಾನಕ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.


Ad Widget

Ad Widget

Ad Widget

ಈ ಘಟನೆ ನಡೆದಿರುವುದು ಇಂಡೋನೇಷ್ಯಾದ ಕೆಂಜರಾನ್ ಪಾರ್ಕ್‌ನಲ್ಲಿ.

ಈ ಸ್ಲೈಡ್ ಅವಘಡದಲ್ಲಿ ಕೆಳಗೆ ಬಿದ್ದ ಮಂದಿಯಲ್ಲಿ 16 ಜನರಲ್ಲಿ ಎಂಟು ಮಂದಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅವರಲ್ಲಿ ಮೂವರಿಗೆ ಮೂಳೆ ಮುರಿದಿದೆ ಎನ್ನಲಾಗಿದೆ. ಸುರಬಯಾ ನಗರದಲ್ಲಿರುವ ವಾಟರ್ ಪಾರ್ಕ್‌ನ ನೀರಿನ ಸ್ಲೈಡ್ ದುರ್ಬಲಗೊಂಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಇಷ್ಟೆಲ್ಲಾ ಅವಘಡ ಸಂಭವಿಸುವುದಕ್ಕೆ ಅವಕಾಶ ನೀಡಿದ ಅಲ್ಲಿನ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ನಾವು ಏನೆನ್ನಲು ಸಾಧ್ಯ ? ಸಿಬ್ಬಂದಿಗಳ ತೀವ್ರ ಕಾರ್ಯ ನಿರ್ಲಕ್ಷ್ಯತೆಯೇ ಈ ಅವಘಡಕ್ಕೆ ಮೂಲ ಕಾರಣ ಎನ್ನಲಾಗಿದೆ.

Leave a Reply

error: Content is protected !!
Scroll to Top
%d bloggers like this: