ಮೊಬೈಲ್ ಕರೆನ್ಸಿ ಹಾಕಲು ಹಣ ನೀಡಿಲ್ಲವೆಂದು ಕೋಪಗೊಂಡ ಮಗ, ಖಾಸಗಿ ಭಾಗಕ್ಕೆ ತ್ರಿಶೂಲ ಚುಚ್ಚಿದ !

Share the Article

ಇದೊಂದು ವಿಚಿತ್ರ ಪ್ರಕರಣ. ಮೊಬೈಲ್ ಗೆ ಕರೆನ್ಸಿ ಹಾಕಲು ತಂದೆ ದುಡ್ಡು ನೀಡಿಲ್ಲವೆಂದು ಮಗನೋರ್ವ ದುಡುಕಿನ ನಿರ್ಧಾರ ತಗೊಂಡು, ತನ್ನ ಖಾಸಗಿ ಭಾಗಕ್ಕೆ ತ್ರಿಶೂಲ ಚುಚ್ಚಿದ್ದಾನೆ. ಈ ವಿಚಿತ್ರ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಈ ಯುವಕ, 6ನೇ ತರಗತಿ ಓದಿದ್ದು, ಯಾವುದೇ ಕೆಲಸ ಮಾಡದೇ ಕಾಲ ಕಳೆಯುತ್ತಿದ್ದ. ಜೊತೆಗೆ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದು, ಮಂಗಳವಾರ ಮೊಬೈಲ್ ಕರೆನ್ಸಿ ಖಾಲಿಯಾಗಿದ್ದರಿಂದ, ತನ್ನ ತಂದೆ ಬಳಿ ಹಣ ಕೇಳಿದ್ದಾನೆ. ಆದರೆ ತಂದೆ ಮೊಬೈಲ್‌ಗೆ ಕರೆನ್ಸಿ ಹಾಕಿಸಲು ಒಪ್ಪಿರಲಿಲ್ಲ. ಈ ಕಾರಣಕ್ಕಾಗಿ ಮನೆಯಲ್ಲಿ ಜಗಳ ಮಾಡಿಕೊಂಡಿದ್ದಾನೆ. ನಂತರ ಯುವಕ ಕೋಪದಲ್ಲಿ ಸೀದಾ ದೇವಸ್ಥಾನಕ್ಕೆ ಹೋಗಿ ಗೊರವಪ್ಪನ ವೇಷ ಹಾಕಿದ್ದಾನೆ. ನಂತರ ಅಲ್ಲಿರುವ ತ್ರಿಶೂಲವನ್ನು ತನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡಿದ್ದಾನೆ. ನಂತರ ತೀರಾ ಅಸ್ವಸ್ಥನಾಗಿ ಬಿದ್ದಿದ್ದಾನೆ ಎನ್ನಲಾಗ್ತಿದೆ. ಇದನ್ನು ಕಂಡ ಸ್ಥಳೀಯರು ಯುವಕನ ತಂದೆಗೆ ವಿಷಯ ತಿಳಿಸಿದ್ದಾರೆ. ಸದ್ಯ ಆತನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಸ್ತ್ರಚಿಕಿತ್ಸೆ ಮೂಲಕ ತ್ರಿಶೂಲ ಹೊರ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Leave A Reply

Your email address will not be published.