ಉಗುರಿನಲ್ಲಿ ಅಂಟಿದ್ದ ರಕ್ತದ ಕಲೆಯಿಂದ ತಗಲಾಕ್ಕೊಂಡ ಕೊಲೆಗಾರ !!

ಯಾವುದೇ ಕಳ್ಳನಿರಲಿ ಅಥವಾ ಕೊಲೆಗಾರನೇ ಇರಲಿ, ಆತ ತಾನು ತಪ್ಪು ಮಾಡಿರುವುದಕ್ಕೆ ಒಂದಲ್ಲ ಒಂದು ರೀತಿಯ ಸಾಕ್ಷಿಯನ್ನು ಬಿಟ್ಟು ಹೋಗಿರುತ್ತಾರೆ. ಅಂತೆಯೇ ಮುಂಬೈನಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ, ನಂತರ ಆತನ ಉಗುರುಗಳ ಮೇಲೆ ಇದ್ದ ರಕ್ತದ ಕಲೆಯಿಂದ ಸಿಕ್ಕಿಬಿದ್ದಿದ್ದಾನೆ.

ಮುಂಬೈನ ಸಕಿನಾಕಾ ಪ್ರದೇಶದ ರೀಮಾ ಭೋಲಾ ಯಾದವ್ ಹತ್ಯೆಯಾದ ದುರ್ದೈವಿ ಹಾಗೂ ಮನೋಜ್ ಪ್ರಜಾಪತಿ (32) ಆರೋಪಿ.


Ad Widget

Ad Widget

Ad Widget

ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ರೀಮಾ ಭೋಲಾ ಹಾಗೂ ಮನೋಜ್ ಪ್ರಜಾಪತಿ ಕಳೆದ ಎರಡು ದಿನಗಳಿಂದ ಪ್ರತ್ಯೆಕ ಮನೆಯಲ್ಲಿ ವಾಸಿಸುತ್ತಿದ್ದರು. ರೀಮಾ ಭೋಲಾ ಮನೆಗೆ ಸ್ನೇಹಿತರೊಬ್ಬರು ಬಂದಾಗ ಆಕೆ ಶವವಾಗಿ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ರೀಮಾ ಭೋಲಾ ಅವರ ಸ್ನೇಹಿತೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕಾಗಮಿಸಿದ ಪೊಲೀಸರಿಗೆ ರೀಮಾ ಯಾದವ್ ಅವರ ಶವವು ಕತ್ತು ಸೀಳಿದ ರೀತಿಯಲ್ಲಿ ಕಂಡು ಬಂದಿತ್ತು. ಅದೇ ಸಂದರ್ಭದಲ್ಲಿ ಆಗಮಿಸಿದ್ದ ಪ್ರಜಾಪತಿಯ ಉಗುರಿನಲ್ಲಿದ್ದ ರಕ್ತದ ಕಲೆಯನ್ನು ನೋಡಿ ಪೊಲೀಸರು ಅನುಮಾನಗೊಂಡಿದ್ದರು. ಹಾಗಾಗಿ ಪ್ರಜಾಪತಿಯನ್ನು ವಿಚಾರಣೆಗೆ ಒಳಪಡಿಸಿದ್ದರು.

ಮೊದಲಿಗೆ ಪ್ರಜಾಪತಿಯು ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ಪೊಲೀಸರ ನಿರಂತರ ವಿಚಾರಣೆಯಿಂದಾಗಿ ಪ್ರಜಾಪತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಕೊಲೆಗೆ ಬಳಸಿದ್ದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿ ಪ್ರಜಾಪತಿಯನ್ನು ಬಂಧಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: