ಕೆಂಪು ಬಣ್ಣಕ್ಕೆ ತಿರುಗಿದ ಆಕಾಶ | ಅಪಶಕುನ ಎಂದ ಚೀನಿ ಜನತೆ

ಚೀನಾದಲ್ಲಿ ನಿನ್ನೆ ಸಂಜೆ ನಡೆದ ಘಟನೆಯಿಂದ ಅಲ್ಲಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶಾಂಘೈನ ಜೋಶನ್ ಬಂದರು ನಗರದಲ್ಲಿ ಸೋಮವಾರ ಸಂಜೆ ಆಕಾಶವು ಇದ್ದಕ್ಕಿದ್ದಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಈ ಘಟನೆ ಜನರಲ್ಲಿ ಅಚ್ಚರಿ ಹಾಗೂ ಆತಂಕ ಮೂಡಿಸಿದೆ.

 

ಆಕಾಶ ಕೆಂಪೇರುತ್ತಿದ್ದಂತೆ ಜನ ಮನೆಯಿಂದ ಹೊರಬಂದು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು ಸೆಲ್‌ಫೋನ್‌ಗಳಲ್ಲಿ ವಿಡಿಯೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೊಗೆ ಪ್ರತಿಕ್ರಿಯಿಸಿದ ಕೆಲ ಚೀನೀಯರು ಆಕಾಶ ಕೆಂಪಾಗುವುದು ಅಪಶಕುನದ ಮುನ್ಸೂಚನೆ ಎಂದಿದ್ದಾರೆ.

ಈ ಬಗ್ಗೆ ಚೀನಾ ಅಕ್ವಾಟಿಕ್ ಪ್ರಾಡಕ್ಟ್ಸ್ ಜೋಶನ್ ಮೆರೈನ್ ಎಂಬ ಸ್ಥಳೀಯ ಮಾಧ್ಯಮ ಮೀನುಗಾರಿಕೆ ದೋಣಿಯಿಂದ ಬೆಳಕು ಬಂದಿರಬಹುದು ಎಂದು ವರದಿ ಮಾಡಿದೆ.

ಭೂವಿಜ್ಞಾನ ವಿಶ್ವವಿದ್ಯಾಲಯದ ಬಾಹ್ಯಾಕಾಶ ಭೌತಶಾಸ್ತ್ರ ಸಂಶೋಧನಾ ತಂಡದ ಸದಸ್ಯರೊಬ್ಬರು ಇದು ಸೌರ ಮತ್ತು ಭೂಕಾಂತೀಯ ಚಟುವಟಿಕೆಯ ಪರಿಣಾಮವಾಗಿರಬಹುದು ಎಂದು ಸೂಚಿಸಿದ್ದಾರೆ.

Leave A Reply

Your email address will not be published.