9 ತಿಂಗಳ ಹಸುಗೂಸನ್ನು ಅಪರಿಚಿತನ ಕೈಗೆ ಕೊಟ್ಟು ಮಹಿಳೆ ಪರಾರಿ ! ಪೊಲೀಸ್ ಠಾಣೆ ಮೊರೆ ಹೋದ ಯುವಕ!

ತಾಯಿಯಾದವಳೊಬ್ಬಳು ಅದು ಹೇಗೆ ತಾನೇ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನು ಇನ್ನೊಬ್ಬರ ಕೈಯಲ್ಲಿ ಕೊಟ್ಟು ಪರಾರಿಯಾಗಲು ಸಾಧ್ಯ? ಆಕೆಯ ಹೆತ್ತ ಕರುಳು ಚುರುಕ್ ಅನ್ನಲಿಲ್ಲವೇ? ಮಾತೃವಾತ್ಸಲ್ಯಕ್ಕೆ ಕಳಂಕ ತಂದಳೇ ಈ ತಾಯಿ? ಈ ಮಾತು ನಿಜ ಅನಿಸುತ್ತದೆ ಏಕೆಂದರೆ, ಓರ್ವ ತಾಯಿ ಮಗುವನ್ನು ಓರ್ವ ಅಪರಿಚಿತ‌ ವ್ಯಕ್ತಿಯ ಕೈಗೆ ಕೊಟ್ಟು ಪರಾರಿಯಾಗಿದ್ದಾಳೆ. ಆ ಯುವಕ ಕಾದು ಕಾದು ಕೊನೆಗೆ ಆಕೆ ಬರದೇ ಇದ್ದುದ್ದನ್ನು ಕಂಡು, ಪೊಲೀಸ್ ಮೊರೆ ಹೋಗಿದ್ದಾನೆ.

ತನ್ನ ವೈಯಕ್ತಿಕ ಕೆಲಸಕ್ಕೆಂದು ರಾಯಚೂರಿಗೆ ತೆರಳಿದ್ದ ಯುವಕ ಮೈಸೂರು ಬಸ್ ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಮಹಿಳೆಯೊಬ್ಬರು ತನ್ನ 9 ತಿಂಗಳ ಮಗುವನ್ನು ಯುವಕನ ಕೈಗೆ ನೀಡಿ ಹೋಗಿದ್ದಾಳೆ. ಆದರೆ ಮೂರು ಗಂಟೆಗಳು ಕಳೆದರೂ ವಾಪಸ್ಸು ಬಾರದೆ ಇದ್ದುದ್ದರಿಂದ ಆತಂಕಗೊಂಡ ಯುವಕ ಪೊಲೀಸ್ ಮೊರೆ ಹೋಗಿದ್ದಾನೆ. ಈ ಘಟನೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ನಡೆದಿದೆ.


Ad Widget

Ad Widget

Ad Widget

ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ನಿವಾಸಿ ರಘು ಕೆಲಸದ ಮೇಲೆ ರಾಯಚೂರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಬಳಿಕ ರಘು ಮಗುವನ್ನು ಸುರಕ್ಷಿತವಾಗಿ ಮೈಸೂರಿಗೆ ಕರೆದುಕೊಂಡು ಬಂದಿದ್ದಾರೆ.ಲಷ್ಕರ್ ಪೊಲೀಸ್ ಠಾಣೆಗೆ ಮಗುವನ್ನು ನೀಡಿದ್ದು, ಮಗುವಿನ ಆರೈಕೆ ಮಾಡಿದ ಸಿಬ್ಬಂದಿಗಳು ಬಾಲ ಮಂದಿರಕ್ಕೆ ಒಪ್ಪಿಸಿ ತಾಯಿಯನ್ನು ಪತ್ತೆ ಹಚ್ಚುವಂತೆ ರಾಯಚೂರು ಪೊಲೀಸರಿಗೆ ತಿಳಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: