ಇವರೆಂಥಾ ಕ್ರೂರಿಗಳು- ಸಮಾಧಿ ಅಗೆದು ಅಪ್ರಾಪ್ತೆಯ ಶವದೊಂದಿಗೆ ಅತ್ಯಾಚಾರ, ಮರುದಿನ ಸ್ಮಶಾನ ತಲುಪಿದ ಮನೆಮಂದಿಗೆ ಶಾಕ್ !

Share the Article

ಕಾಮದ ಪಟ್ಟಿ ಕಣ್ಣಿನಲ್ಲಿ ಅಂಟಿಕೊಂಡ ವ್ಯಕ್ತಿಗಳೇ ಇಂತಹ ನೀಚ ಕೆಲಸ ಮಾಡಲು ಸಾಧ್ಯ. ಈ ಘಟನೆ
ಓದಿದವರೆಲ್ಲರೂ ಮನುಷ್ಯ ಇಷ್ಟು ಅನಾಗರಿಕನಾಗಲು ಹೇಗೆ ಸಾಧ್ಯ ಎಂದು ಯೋಚಿಸುವ ಮಟ್ಟಕ್ಕೆ ಹೋಗಿದೆ. ಮೃತಪಟ್ಟ ಬಾಲಕಿಯ ಶವವನ್ನು ಸಮಾಧಿಯಿಂದ ಹೊರತೆಗೆದು, ಅತ್ಯಾಚಾರ ನಡೆಸಿದ್ದಾರೆ ದುಷ್ಕರ್ಮಿಗಳು.

ಮೇ 5 ರಂದು ಈ ಘಟನೆ ನಡೆದಿದೆ. ಮೃತ ಬಾಲಕಿಯ ಸಂಬಂಧಿಕರು ತಮ್ಮ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಮರುದಿನ ಬೆಳಿಗ್ಗೆ ಸ್ಮಶಾನಕ್ಕೆ ಹೋದಾಗ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಮಾಧಿ ಅಗೆದಿರುವುದನ್ನು ಕಂಡು ಸಂಬಂಧಿಕರು ಹೆದರಿದ್ದಾರೆ. ಮೃತ ದೇಹವು ಮುಚ್ಚದೇ ಹಾಗೆಯೇ ಬಿದ್ದಿತ್ತು. ದೇಹದ ಮೇಲೆ ಅತ್ಯಾಚಾರದ ಗುರುತುಗಳಿದ್ದವು. ಇದನ್ನು ಕಂಡು ದಿಗಿಲುಗೊಂಡ ಮನೆಮಂದಿ ಪೊಲೀಸರನ್ನು ಸಂಪರ್ಕಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ, ಘಟನೆಯ ಬಗ್ಗೆ ಪಾಕಿಸ್ತಾನದ ಗುಜರಾತ್‌ನಲ್ಲಿ ಕೆಲವರು ಸಮಾಧಿಯನ್ನು ಅಗೆದು ಹದಿಹರೆಯದ ಬಾಲಕಿಯ ಶವವನ್ನು ಹೊರತೆಗೆದು ಅತ್ಯಾಚಾರ ಎಸಗಿದ್ದಾರೆ.

ಈ ನಿಟ್ಟಿನಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್‌ಎನ್) ಉಪ ಪ್ರಧಾನ ಕಾರ್ಯದರ್ಶಿ ಅತಾವುಲ್ಲಾ ತರಾರ್ ಮೇ 6 ರಂದು ಟ್ವಿಟರ್‌ನಲ್ಲಿ 17 ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಿಎಂ ವರದಿ ಕೇಳಿದ್ದಾರೆ. ಅಪರಾಧಿಗಳನ್ನು ಕಂಬಿ ಹಿಂದೆ ಹಾಕುವವರೆಗೂ ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Leave A Reply