ಮದುವೆ ಗಾಸಿಪ್ ಗೆ ಕಾಲು ತೋರಿಸಿ ಫೋಟೋ ಹಾಕಿ ಸ್ಟ್ರಾಂಗ್ ಮೆಸೇಜ್ ನೀಡಿದ ನಟಿ ಸಾಯಿ ಪಲ್ಲವಿ!

ನಟಿ ಸಾಯಿ ಪಲ್ಲವಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ? ಆಕೆಯ ನಟನೆಗೆ ಫಿದಾ ಆದವರು ಮಾತ್ರ ಅಲ್ಲ ಆಕೆಯ ಸಹಜ ಸೌಂದರ್ಯಕ್ಕೂ ಮಾರು ಹೋದವರು ತುಂಬಾ ಮಂದಿ ಇದ್ದಾರೆ. ದಕ್ಷಿಣ ಭಾರತದಲ್ಲಿ ನಟಿ ಸಾಯಿ‌ಪಲ್ಲವಿಗೆ ಸಖತ್ ಡಿಮ್ಯಾಂಡ್ ಇದೆ. ಗ್ಲ್ಯಾಮರ್ ಗೆ ಜಾಸ್ತಿ ಒತ್ತು ಕೊಡದೇ, ತಮ್ಮ ಸಹಜ ನಟನೆಯ ಮೂಲಕವೇ ಜನಮನ ಗೆದ್ದಿರುವ ನಟಿ ಎಂದರೆ ತಪ್ಪಾಗಲಾರದು.

ಇಂತಿಪ್ಪ ಸಾಯಿಪಲ್ಲವಿ ಕುರಿತು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆ ಬಗ್ಗೆ ಮಾತು ಬಂದಿದೆ. ಸಾಯಿ ಪಲ್ಲವಿ ಅತಿ ಬೇಡಿಕೆಯ ನಟಿ. ಈ ನಟಿಯ ಕಾಲ್ ಶೀಟ್ ಪಡೆಯಲು ಎಲ್ಲಾ ನಿರ್ಮಾಪಕರು ಬಯಸುತ್ತಾರೆ. ಇಷ್ಟೆಲ್ಲಾ ಬೇಡಿಕೆಯಿರುವ ನಟಿ ಒಮ್ಮಿಂದೊಮ್ಮೆಲೇ ಮದುವೆ ಆಗುತ್ತಾರೆ ಎಂದರೆ, ಅವರ ಅಭಿಮಾನಿಗಳಿಗೆ ನಂಬಲು ಕಷ್ಟ ಸಾಧ್ಯ. ಆದರೆ ಈ ಎಲ್ಲಾ ಗಾಳಿ ಸುದ್ದಿ, ಗಾಸಿಪ್ ಗಳಿಗೆ ಉತ್ತರ ನೀಡಲು ಸ್ವತಃ ನಟಿಯೇ ಬಂದಿದ್ದಾರೆ.


Ad Widget

Ad Widget

Ad Widget

ಆದರೆ ಅವರು ಮದುವೆ ಬಗ್ಗೆ ನೇರವಾಗಿ ಏನನ್ನೂ ಹೇಳಲ್ಲ. ಬದಲಿಗೆ ಒಂದೇ ಒಂದು ಫೋಟೋ ಹಂಚಿಕೊಂಡು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಓರ್ವ ಮಹಿಳೆ ಸೀರೆ ಧರಿಸಿ ಓಡಿ ಹೋಗುತ್ತಿರುವ ಫೋಟೋವನ್ನು ಸಾಯಿ ಪಲ್ಲವಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮುಖ ಕಾಣಿಸಿಲ್ಲ. ಬರೀ ಕಾಲುಗಳು ಮಾತ್ರ ಹೈಲೈಟ್ ಆಗಿವೆ. ಅದನ್ನು ತಕ್ಷಣಕ್ಕೆ ನೋಡಿದರೆ ಮಹಿಳೆ ಹಾರುತ್ತಿರುವ ರೀತಿಯಲ್ಲೂ ಕಾಣಿಸುತ್ತದೆ. ಇದು ಅವರ ಮುಂದಿನ ಸಿನಿಮಾಗೆ ಸಂಬಂಧಿಸಿದ ಫೋಟೋ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ನಾಳೆ (ಮೇ 9) ಸಾಯಿ ಪಲ್ಲವಿ ಜನ್ಮದಿನ. ಆ ಪ್ರಯುಕ್ತ ಹೆಚ್ಚಿನ ಮಾಹಿತಿ ನೀಡುವುದಾಗಿ ಸಾಯಿ ಪಲ್ಲವಿ ತಿಳಿಸಿದ್ದಾರೆ.

‘ಅವಳೊಂದು ಅಚ್ಚರಿ. ಸ್ವಲ್ಪ ಸಮಯ ಬಚ್ಚಿಟ್ಟುಕೊಂಡಿದ್ದಳು. ಈ ಸೋಮವಾರ ನಿಮ್ಮನ್ನು ನೋಡಲು ಆಕೆ ಸಿದ್ಧವಾಗಿದ್ದಾಳೆ ಎನಿಸುತ್ತದೆ’ ಎಂಬ ಕ್ಯಾಪ್ಟನ್ ಜೊತೆಯಲ್ಲಿ ಈ ಫೋಟೋವನ್ನು ಸಾಯಿ ಪಲ್ಲವಿ ಶೇರ್ ಮಾಡಿಕೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: