ಪತಿಯನ್ನು ಸಾಯಿಸಲು ಹಾಲಿನಲ್ಲಿ ವಿಷ ಹಾಕಿ ಕುಡಿಯಲು ಕೊಟ್ಟ ನವವಧು| ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ ಗಂಡ,ಕೊನೆಗೂ ಬದುಕುಳಿದ!

ಬಲವಂತದ ಮದುವೆ, ಇಷ್ಟವಿಲ್ಲದ ಮದುವೆ ಹೆಚ್ಚಾಗುತ್ತಿದ್ದು, ಹೆಣ್ಣುಮಕ್ಕಳ ಇಷ್ಟ ಕೇಳದೆ ಮದುವೆ ಮಾಡುವ ಹೆತ್ತ ತಂದೆ ತಾಯಂದಿರು ಇದನ್ನು ಅರ್ಥ ಮಾಡಬೇಕು. ಮದುವೆ ಏನೋ ಮಾಡಿಕೊಡುತ್ತೀರಾ ಆದರೆ ? ಸಮ್ಮತವಲ್ಲದ ಮದುವೆಗೆ ಬಲಿಯಾಗುವುದು ಹುಡುಗ. ಇಂತಹ ಅನೇಕ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಅಂತಹ ಒಂದು ಪ್ರಕರಣ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದಿದೆ.

ಮದುವೆಯಾದ ಒಂದೇ ವಾರಕ್ಕೆ ಪತ್ನಿಯೊಬ್ಬಳು ಹಾಲಿನಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದ್ದಾಳೆ. ನಾಗಮಣಿ ಎಂಬ ನವವಿವಾಹಿತೆಯೇ ಪತಿಯನ್ನೇ ಕೊಲೆ ಮಾಡಲು ಯತ್ನಿಸಿದ ಪತ್ನಿ.


Ad Widget

Ad Widget

Ad Widget

ಒಂದು ವಾರದ ಹಿಂದೆ ಮದನಂತ ಪುರಂ ಗ್ರಾಮದ ನಾಗಮಣಿ ಜೋನ್ನಗಿರಿ ನಿವಾಸಿ ಲಿಂಗಯ್ಯ ಅವರ ಜೊತೆ ಮದುವೆ ಆಗಿದ್ದಳು. ಮದುವೆ ಆದ ಒಂದೇ ವಾರಕ್ಕೆ ವೈವಾಹಿಕ ಜೀವನದಿಂದ ಮುಕ್ತಿ ದೊರೆಯಲು ನಾಗಮಣಿ ತನ್ನ ಪತಿಯನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ.

ನಾಗಮಣಿಗೆ ಲಿಂಗಯ್ಯನ ಜೊತೆ ಮದುವೆ ಆಗಲು ಇಷ್ಟವಿರಲಿಲ್ಲ. ಆದರೂ ಆಕೆಯ ಪೋಷಕರು ಬಲವಂತವಾಗಿ ಈ ಮದುವೆ ಮಾಡಿಸಿದ್ದಾರೆ. ಹಾಗಾಗಿ ನಾಗಮಣಿ ಪತಿಯ ಮನೆಗೆ ಹೋದ ಒಂದು ವಾರದಲ್ಲೇ ಹಾಲಿನಲ್ಲಿ ವಿಷ ಹಾಕಿ ಲಿಂಗಯ್ಯನನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ.

ಹಾಲು ಕುಡಿಯುತ್ತಿದ್ದಂತೆ ಲಿಂಗಯ್ಯ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾನೆ. ತಕ್ಷಣ ಕುಟುಂಬದ ಸದಸ್ಯರು ಆತನನ್ನು ಗುತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಲಿಂಗಯ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಬಗ್ಗೆ ಗುತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜೋನ್ನಗಿರಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: