ಸುಳ್ಯ :ವಿವಾಹಿತ ಯುವತಿ ನೇಣುಬಿಗಿದು ಆತ್ಮಹತ್ಯೆ

Share the Article

ಸುಳ್ಯ: ಗಾಂಧಿನಗರ ಕೆರೆಮೂಲೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಮೀನ ಎಂಬವರ ಮಗಳು ಆಯೀಶಾ ಎಂಬಾಕೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 6ರಂದು ಸಂಜೆ ವರದಿಯಾಗಿದೆ.

ಸುಳ್ಯ ಬೆಟ್ಟಂಪ್ಪಾಡಿ ಜಟ್ಟಿಪಳ್ಳ ಮುಂತಾದ ಕಡೆಗಳಲ್ಲಿ ಈ ಹಿಂದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಮೀನ ಕುಟುಂಬ ಇತ್ತೀಚೆಗೆ ಕೆರೆಮೂಲೆ ಬಳಿ ಬಾಡಿಗೆ ಮನೆ ಮಾಡಿ ವಾಸಿಸುತ್ತಿದ್ದರು.

ನಿನ್ನೆ ಸಂಜೆ ಪ್ಯಾನ್ ಗೇ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಮನೆಯವರು ಕೂಡಲೇ ಅವರನ್ನು ಹಗ್ಗದಿಂದ ಕೆಳಗೆ ಇಳಿಸಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಆಯಿಷಾರಿಗೆ ಕಳೆದ ವರ್ಷ ಕಾಸರಗೋಡು ಮಂಞಪಾರೆಯ ಯುವಕನೊಂದಿಗೆ ವಿವಾಹವಾಗಿದ್ದು ಯುವಕ ವಿದೇಶಿದಲ್ಲಿರುವುದೆಂದು ತಿಳಿದು ಬಂದಿದೆ.

ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave A Reply