ವಿಮಾನಯಾನ ಸಂದರ್ಭದಲ್ಲಿ ಆಕಾಶದಲ್ಲೇ ಮಗು ಹುಟ್ಟಿದರೆ ಯಾವ ದೇಶದ ಪೌರತ್ವ ಸಿಗುತ್ತೆ ಗೊತ್ತಾ..?

ವಿಮಾನ ಪ್ರಯಾಣ ಸಾಮಾನ್ಯರ ಕೈಗೆಟುಕುವಷ್ಟರ ಮಟ್ಟಿಗೆ ಈಗ ಲಭಿಸುತ್ತಿದೆ. ಬಹುಬೇಗನೇ ನಮಗೆ ಬೇಕಾದ ಸ್ಥಾನಕ್ಕೆ ತಲುಪಬಹುದು, ಜೊತೆಗೆ ತುರ್ತು ಸಂದರ್ಭಗಳಿಗೂ ಇದು ಬಹುಮುಖ್ಯ ವಾಹನ. ಖರ್ಚು ಸ್ವಲ್ಪ ಹೆಚ್ಚೇ ಆದರೂ ತುರ್ತು ಸಂದರ್ಭಗಳಲ್ಲಿ ಈ ವಿಮಾನಯಾನ ಪ್ರಯೋಜನಕಾರಿ. ಈ ವಿಮಾನದ ಕುರಿತು ನಾವು ಯಾಕೆ ಇಷ್ಟೊಂದು ವಿವರಣೆ ನೀಡುತ್ತಿದ್ದೇವೆ ಎಂದರೆ ಕೆಲವೊಮ್ಮೆ ವಿಮಾನದಲ್ಲಿ ಪ್ರಯಾಣಿಸುವಾಗ ಮಗು ಜನಿಸಿದ ಕೆಲ ಪ್ರಕರಣಗಳನ್ನು ನಾವು ಕೇಳಿದ್ದೇವೆ.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೇ, ಮಗು ಯಾವ ದೇಶದಲ್ಲಿ ಜನಿಸುತ್ತದೆಯೋ ಆ ದೇಶದ ಪೌರತ್ವ ಮಗುವಿಗೆ ನೀಡಲಾಗುತ್ತದೆ. ಮಗು ಭಾರತದಲ್ಲಿ ಜನಿಸಿದರೆ ಭಾರತದ ಪೌರತ್ವ ಸಿಗುತ್ತದೆ. ವಿದೇಶದಲ್ಲಿ ಜನಿಸಿದರೆ ವಿದೇಶದ ಪೌರತ್ವ ಪಡೆಯಬಹುದು. ಹಾಗಿರುವಾಗ, ಅಂತರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆರಿಗೆಯಾದರೆ ಯಾವ ಪೌರತ್ವ ಸಿಗಬಹುದು? ಈ ಕುತೂಹಲ ನಿಮಗಿದೆಯೇ ? ಹಾಗಾದರೆ ಬನ್ನಿ ತಿಳಿಯೋಣ.


Ad Widget

Ad Widget

Ad Widget

ಮೊದಲನೆಯದಾಗಿ, 7 ತಿಂಗಳು ಪೂರೈಸಿದ ಗರ್ಭಿಣಿ ಯರಿಗೆ ಭಾರತದಲ್ಲಿ ವಿಮಾನಯಾನವನ್ನು ನಿಷೇಧ ಗೊಳಿಸಲಾಗಿದೆ. 7 ತಿಂಗಳು ತುಂಬಿದ ಗರ್ಭಿಣಿಯರಿಗೆ ವಿಮಾನ ಪ್ರಯಾಣ ಯೋಗ್ಯವಲ್ಲ. ಹಾಗಾಗಿ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗುವುದಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ತುರ್ತು ಸಂದರ್ಭಗಳಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ದೊರಕುತ್ತದೆ.

ಒಂದು ವೇಳೆ ವಿಮಾನದಲ್ಲಿ ಪ್ರಯಾಣಿಸುವ ವೇಳೆಯೇ ಹೆರಿಗೆಯಾದಲ್ಲಿ ಮಗುವಿಗೆ ಪೌರತ್ವ ನೀಡುವ ಮುನ್ನ ಕೆಲ ಸಂಗತಿಗಳನ್ನು ಗಮನಿಸಲಾಗುತ್ತದೆ. ಭಾರತದಿಂದ ಬ್ರಿಟನ್‌ಗೆ ಹೋಗುವ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದರೆ, ಮಗುವಿನ ಜನ್ಮಸ್ಥಳ ಮತ್ತು ಪೌರತ್ವದ ಬಗ್ಗೆ ಪ್ರಶ್ನೆ ಬರುತ್ತದೆ. ಆಗ ಮಗು ಹುಟ್ಟುವ ವೇಳೆಗೆ ವಿಮಾನ ಯಾವ ದೇಶದಲ್ಲಿ ಹಾರಿತ್ತು ಎಂಬುದನ್ನು ನೋಡಬೇಕಾಗುತ್ತದೆ.

ತಾಯಿ-ಮಗು ವಿಮಾನ ಇಳಿಯುವ ದೇಶದ ವಿಮಾನ ನಿಲ್ದಾಣದಲ್ಲಿ ದಾಖಲೆ ಪಡೆಯಬೇಕು. ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಜನ್ಮ ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಬಹುದು. ಬೇರೆ ದೇಶದ ಪೌರತ್ವ ಪಡೆಯಲು ಪಾಲಕರಿಗೆ ಇಷ್ಟವಿಲ್ಲದೆ ಹೋದಲ್ಲಿ ಮಗುವಿಗೆ ಹೆತ್ತವರ ರಾಷ್ಟ್ರೀಯತೆಯನ್ನು ನೀಡಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಪೌರತ್ವಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಕಾನೂನುಗಳಿವೆ.

ಉದಾ:ಬಾಂಗ್ಲಾದೇಶದಿಂದ ಅಮೆರಿಕಕ್ಕೆ ತೆರಳುವ ವಿಮಾನವು ಭಾರತದ ಗಡಿಯ ಮೂಲಕ ಹಾದು ಹೋಗುತ್ತಿದೆ ಎಂದಿಟ್ಟುಕೊಳ್ಳಿ. ಈ ಸಂದರ್ಭದಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದರೆ, ಮಗುವಿನ ಜನ್ಮಸ್ಥಳ ಭಾರತವೆಂದು ತೆಗೆದುಕೊಳ್ಳಲಾಗುವುದು. ಹಾಗೆಯೇ ಇಲ್ಲಿನ ಪೌರತ್ವ ನೀಡಲಾಗುತ್ತದೆ. ಮಗು ತನ್ನ ಹೆತ್ತವರ ರಾಷ್ಟ್ರೀಯತೆ ಮತ್ತು ಜನಿಸಿದ ದೇಶದ ಪೌರತ್ವ ಎರಡನ್ನೂ ಪಡೆಯಬಹುದು. ಆದರೆ ಭಾರತದಲ್ಲಿ ಎರಡು ದೇಶಗಳ ಪೌರತ್ವ ನೀಡುವುದಿಲ್ಲ.

ಅಮೆರಿಕದಲ್ಲಿ ಇಂಥ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ನೆದರ್ ಲ್ಯಾಂಡ್ ನ ರಾಜಧಾನಿ ಆಂಸ್ಟರ್ಡ್ಯಾಮ್ ನಿಂದ ಅಮೆರಿಕಕ್ಕೆ ವಿಮಾನವೊಂದು ತೆರಳುತ್ತಿತ್ತು. ಈ ವೇಳೆ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಸಮಯದಲ್ಲಿ ವಿಮಾನವು ಅಟ್ಲಾಂಟಿಕ್ ಸಾಗರದ ಮೇಲೆ ಹಾರುತ್ತಿತ್ತು. ವಿಮಾನ ಲ್ಯಾಂಡ್‌ಆದ ಬಳಿಕ ತಾಯಿ ಮತ್ತು ಮಗುವನ್ನು ಅಮೆರಿಕದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುಎಸ್ ಗಡಿಯಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಕಾರಣದಿಂದಾಗಿ,ಮಗುವಿಗೆ ನೆದರ್ಲ್ಯಾಂಡ್ ಮತ್ತು ಅಮೆರಿಕದ ಪೌರತ್ವ ಸಿಕ್ಕಿತ್ತು. ಪೌರತ್ವ ಆಯ್ದುಕೊಳ್ಳುವ ಹಕ್ಕು ಪಾಲಕರಿಗಿದೆ. ಎರಡೂ ದೇಶಗಳ ಪೌರತ್ವವನ್ನೂ ಅವರು ಪಡೆಯಬಹುದು. ಇಲ್ಲವೇ ಹೆತ್ತವರ ರಾಷ್ಟ್ರೀಯತೆಯನ್ನು ಪಡೆಯಬಹುದು.

Leave a Reply

error: Content is protected !!
Scroll to Top
%d bloggers like this: