ಪೂರಾ ಕಾಂಡೋಮ್ಸ್ ಗಳಿಂದ ಅಲಂಕೃತವಾಗಿರುವ ‘ ಕಾಫಿ & ಕಾಂಡೋಮ್ಸ್ ಕೆಫೆ ‘ ಎಲ್ಲಿದೆ ಗೊತ್ತಾ ?

ಅದು ಥೈಲ್ಯಾಂಡ್. ಥೈಲ್ಯಾಂಡ್ ದೇಶದ ಹೆಸರು ಕೇಳಿದ ಕೂಡಲೇ ಬ್ಯಾಚುಲರ್ ಗಳ ಕಣ್ಣು ಕಿವಿ ಎಲ್ಲವೂ ನೆಟ್ಟಗಾಗುತ್ತದೆ ! ಹಾಗಿದೆ ಥೈಲ್ಯಾಂಡ್ ಮತ್ತದರ ರಾಜಧಾನಿ ಬ್ಯಾಂಕಾಕ್ ನ ಮಹಾತ್ಮೆ!


Ad Widget

Ad Widget

Ad Widget

ಬ್ಯಾಂಕಾಕ್ ಜಗತ್ತಿನ ಸೆಕ್ಸ್ ಕ್ಯಾಪಿಟಲ್. ಅಲ್ಲಿ ಸೆಕ್ಸ್ ಉಚಿತವಾಗಿ ದೊರೆಯುತ್ತದೆ. ಅದೇ ಕಾರಣಕ್ಕೆ ಅದು ವಿಶ್ವದಾದ್ಯಂತ ಹಲವು ದೇಶಗಳ ಎಲಿಜಿಬಲ್ – ಅನ್ ಎಲಿಜಿಬಲ್ ಬ್ಯಾಚುಲರ್ ಗಳನ್ನು ಆಕರ್ಷಿಸುತ್ತದೆ. ಅಲ್ಲಿ ಸೆಕ್ಸ್ ಅಂದರೆ ರಸ್ತೆ ಬದಿಯಲ್ಲಿ ತರಕಾರಿ ಕೊಂಡಷ್ಟೆ ಅಗ್ಗ. ನಾವೀಗ ಹೇಳ ಹೊರಟದ್ದು ಅಲ್ಲಿನ ಸೆಕ್ಸ್ ಲೈಫ್ ನ ಬಗ್ಗೆಯಲ್ಲ, ಬದಲಿಗೆ ಅಲ್ಲಿ ಹುಟ್ಟಿಕೊಂಡಿರುವ ಒಂದು ವಿಶಿಷ್ಟ ಕಾಫೀ ಶಾಪ್ ನ ಬಗ್ಗೆ.

ಹೌದು, ಥೈಲ್ಯಾಂಡ್‌ನಲ್ಲಿರುವ ಈ ಕೆಫೆ, ಇವತ್ತಿನ ವಿಶ್ವದ ಬಹುದೊಡ್ಡ ಸಮಸ್ಯೆಯಾದ ಜನಸಂಖ್ಯಾ ಬೆಳವಣಿಗೆಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಿರ್ಮಾಣ ಆಗಿದೆ. ಕಾಫಿ ಅಂಡ್ ಕಾಂಡೋಮ್ಸ್’ ಎಂದೇ ಹೆಸರಿರುವ ಈ ಕೆಫೆ ಕಾಂಡೋಮ್ಸ್ ನಿಂದಲೇ ಕಂಗೊಳಿಸುತ್ತಿದೆ.

ಬ್ಯಾಂಕಾಂಕ್ ನ ಈ ‘ಕಾಫಿ ಅಂಡ್ ಕಾಂಡೋಮ್ಸ್’ ಕೆಫೆ ಟೋಟಲ್ ಲೀ ಕಾಂಡೊಮ್ ಮಯ. ಅಲ್ಲಿನ ಪ್ರತಿಮೆಗಳು, ಅವಿ ಧರಿಸಿದ ಥರಾವರಿ ಡ್ರೆಸ್ ಗಳು, ಸಂತ ಕ್ಲಾಸ್ ಗಡ್ಡ, ಅಲಂಕರಿಸಿದ ಆಟಿಕೆ, ಹರಡಿ ಇತ್ತಾ ಹೂಗಳು ಹೀಗೆ ಎಲ್ಲವನ್ನೂ ವಿಭಿನ್ನ ಬಣ್ಣದ ಕಾಂಡೋಮ್ ಗಳಿಂದ ರಚಿಸಲಾಗಿದೆ. ಅಷ್ಟೇ ಯಾಕೆ ಟೇಬಲ್ ಸೇರಿದಂತೆ ಕೆಫೆ ಒಳಗಡೆಯ ಬಹುತೇಕ ವಸ್ತುಗಳನ್ನು ಕಾಂಡೋಮ್ ಗಳಿಂದಲೇ ಮಾಡಲಾಗಿದೆ. ಅಲ್ಲದೆ ಗೋಡೆ ಮೇಲಿನ ವಾಲ್ ಪೇಪರ್, ಚಿತ್ರಗಳಲ್ಲಿ ಕೂಡಾ ಕಾಂಡೋಮ್ ಕಂಡುಬರುತ್ತಿದೆ.

ಇತ್ತೀಚಿಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಮೊಹ್ನಿಶ್ ದೌಲ್ತಾನಿ ವಿಡಿಯೋವೊಂದನ್ನು ಫೋಸ್ಟ್ ಮಾಡಿದ್ದು, ಈ ಸ್ಥಳದ ಬಗ್ಗೆ ವಿವರಣೆ ನೀಡಿದ್ದಾರೆ. ಅದರ ಇನ್ಸ್ಟ ಲಿಂಕ್ ಇಲ್ಲಿದೆ ನೋಡಿ.

‘ಕುಟುಂಬ ನಿಯಂತ್ರಣ, ರೋಗಗಳ ಮತ್ತಿತರ ಸಮಸ್ಯೆಗಳ ಬಗ್ಗೆ ಜನರಲ್ಲಿನ ಅಸಡ್ಡೆ ಮತ್ತು ನಿರ್ಲಕ್ಷ್ಯದಿಂದ ಹೊರಬರುವಂತೆ ಅರಿವು ಮೂಡಿಸಲು ಈ ಕೆಫೆಯ ಥೀಮ್ ರೆಡಿ ಮಾಡಲಾಗಿದೆ. ಹಾಗೆಂದು ಈ ಕಾಂಡೋಮ್ ಅಲಂಕಾರದ ಕಾರಣ ವಿವರಿಸಿದ್ದಾರೆ ಮೊಹ್ನಿಶ್ ಅವರು.

Leave a Reply

error: Content is protected !!
Scroll to Top
%d bloggers like this: