‘ಮರಣ’ ಎಲ್ಲರಿಗೂ ಬರುತ್ತೆ. ಸಾವು ಖಚಿತ. ಆದರೆ ನೊಂದ ಜೀವಗಳು ತಮಗೆ ಬದುಕಲು ಇಷ್ಟವಿಲ್ಲ ನಮಗೆ ಇಚ್ಛಾಮರಣ ಕೊಡಿ, ಎಂದು ಅವಲತ್ತುಕೊಂಡರೆ? ಇಂಥ ಒಂದು ಮರಣವನ್ನು ನೀಡಲು ಮುಸ್ಲಿಂಮರು ಕಾನೂನಿನ ಮೊರೆ ಹೋಗಿದ್ದಾರೆ.
ಮೀನುಗಾರಿಕೆಯಲ್ಲಿ ತೊಡಗಿರುವ ಈ ಕುಟುಂಬಗಳು ತಾವು ಸಾಯುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿವೆ. 2016 ರಿಂದ ಪೋರಬಂದರ್ನ ಗೋಸಾಬರ ಬಂದರಿನಲ್ಲಿ ದೋಣಿ ನಿಲುಗಡೆಯನ್ನು ಸರ್ಕಾರ ನಿಷೇಧಿಸಿದೆ. ಈ ನಿಷೇಧದಿಂದ ತೊಂದರೆಗೀಡಾಗಿರುವ ಹಿನ್ನೆಲೆಯಲ್ಲಿ ತಾವು ಸಾಯಬೇಕಿದೆ ಎಂದು ಅವರು ಹೇಳಿದ್ದಾರೆ.
ಮೀನುಗಾರಿಕೆ ಮತ್ತು ಬೋಟಿಂಗ್ ಪರವಾನಗಿ ಇದ್ದರೂ ತಮ್ಮ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎನ್ನುವುದು ಈ ಮುಸ್ಲಿಂ ಕುಟುಂಬಗಳ ಆರೋಪ. ಇದಕ್ಕೆ ಸಂಬಂಧಿಸಿದಂತೆ ಇದಾಗಲೇ ರಾಜ್ಯಪಾಲರು, ಮುಖ್ಯಮಂತ್ರಿಗಳು, ಪೋರಬಂದರ್ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ ಎನ್ನುವುದು ಇವರ ಆರೋಪ. ಸದ್ಯ ಹೈಕೋರ್ಟ್ಗೆ ರಜೆ ಇದ್ದು, ರಜಾ ದಿನಗಳು ಮುಗಿದ ನಂತರ ಈ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ನಾವೆಲ್ಲಾ ಸಾಯಬೇಕು, ನಮಗೆ ದಯಾಮರಣ ಕೊಡಿ… ಹೀಗೆಂದು 100 ಮುಸ್ಲಿಂ ಕುಟುಂಬಗಳು ಅಹಮದಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.