ತನ್ನ ನಗುಮುಖದಿಂದ ಮೀಮ್ ಮೂಲಕ ಪ್ರಖ್ಯಾತಿ ಹೊಂದಿದ್ದ 16 ವರ್ಷದ ಮಾಡೆಲ್ ದುರಂತ ಸಾವು !!

Share the Article

ಅಮೆರಿಕದ ಖ್ಯಾತ ಮಾಡೆಲ್ ತನ್ನ 16ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾಳೆ. 5 ವರ್ಷದವಳಿದ್ದಾಗ ಅಮೆರಿಕನ್ ರಿಯಾಲಿಟಿ ಟೆಲಿವಿಷನ್ ಸೀರೀಸ್ TLC ಯ ‘ಟಾಡ್ಲರ್ಸ್ & ಟಿಯಾರಾಸ್’ ನಲ್ಲಿ ಕಾಣಿಸಿಕೊಂಡ ರಾಣಿ ಕೈಲಿಯಾ ಪೋಸಿ ನಿಧನರಾಗಿದ್ದು, ಸಾವಿನ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.

ಈ ಬಗ್ಗೆ ಅವರ ತಾಯಿ ಫೇಸ್‌ಬುಕ್‌ನಲ್ಲಿ ಘೋಷಿಸಿದ್ದು, ‘ನನಗೆ ಯಾವುದೇ ಮಾತುಗಳಿಲ್ಲ, ಯಾವುದೇ ಆಲೋಚನೆಗಳಿಲ್ಲ. ಸುಂದರವಾದ ಹೆಣ್ಣು ಮಗು ಕಣ್ಮರೆಯಾಯಿತು. ಕೈಲಿಯಾಳನ್ನು ಕಳೆದುಕೊಂಡು ದುಃಖಿಸುತ್ತಿರುವಾಗ ದಯವಿಟ್ಟು ನಮಗೆ ಗೌಪ್ಯತೆಯನ್ನು ನೀಡಿ. ನನ್ನ ಮಗು ಎಂದೆಂದಿಗೂ ಶಾಶ್ವತ’ ಎಂದು ಮಾರ್ಸಿ ಪೋಸಿ ಗ್ಯಾಟರ್‌ಮ್ಯಾನ್ ತನ್ನ ಮಗಳ ಫೋಟೋ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ಆದರೆ ಆಕೆಯ ಸಾವಿಗೆ ಕಾರಣ ಇನ್ನೂ ತಿಳಿದಿಲ್ಲ.

ಕೈಲಿಯಾ ಪೋಸಿ 2009 ರಲ್ಲಿ ‘ಟಾಡ್ಲರ್ಸ್ & ಟಿಯಾರಾಸ್’ ನಲ್ಲಿ 3 ವರ್ಷದವರಾಗಿದ್ದಾಗ ಕಾಣಿಸಿಕೊಂಡರು. ಕಾರ್ಯಕ್ರಮದ 2012ರ ಸಂಚಿಕೆಯಲ್ಲಿ ಕೈಲಿಯಾ 5 ವರ್ಷದವಳಾಗಿದ್ದಾಗ ಆಕೆ ನೀಡಿದ ನಗುಮೊಗದ ಪೋಸ್ ಮೀಮ್ ಆಗಿ ಖ್ಯಾತಿ ಪಡೆಯಿತು. ಇದು ಪ್ರಪಂಚದಾದ್ಯಂತ ಆಕೆಯ ಮುಖವನ್ನು ಗುರುತಿಸುವಂತೆ ಮಾಡಿತು.

ಕೈಲಿಯಾ ಪೋಸಿ ಇತ್ತೀಚೆಗೆ ಮಿಸ್ ಟೀನ್ ವಾಷಿಂಗ್ಟನ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ಇದೀಗ ಆಕೆಯ ನಿಧನ ಆಕೆಯ ಅಭಿಮಾನಿಗಳಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ.

Leave A Reply

Your email address will not be published.