ಬೆಕ್ಕಿನ ಮೇಲೆ ಕ್ರೌರ್ಯ ಮೆರೆದವನಿಗೆ 10 ವರ್ಷ ಜೈಲು ಶಿಕ್ಷೆ!

ಬೆಕ್ಕು ಹೆಚ್ಚಿನ ಜನರಿಗೆ ಮುದ್ದಿನ ಸಾಕು ಪ್ರಾಣಿ. ಇನ್ನು ಕೆಲವರಿಗೆ ಬೆಕ್ಕನ್ನು ಕಂಡರಾಗದು. ಆದರೆ ಬೆಕ್ಕು ಮನೆಯೊಳಗಿದ್ದರೆ ಫ್ರೆಂಡ್ ಮನೆಯಲ್ಲಿದ್ದ ಹಾಗೆಯೇ, ಮನೆಯ ಮಾಲೀಕರ ಜೊತೆ ಅತ್ಯಂತ ಆಪ್ತವಾಗಿರುತ್ತದೆ. ಇತ್ತೀಚೆಗೆ ಮಹಿಳೆಯೊಬ್ಬರು ಬೆಕ್ಕನ್ನು ಕೊಂದ ಘಟನೆ ನೆನಪಿದೆಯಾ? ಇದೇ ಸಾಲಿಗೆ ಸೇರಿದ ಇನ್ನೊಬ್ಬ ಪತ್ತೆಯಾಗಿದ್ದಾನೆ.

ಈತನಿಗೂ ಬೆಕ್ಕು ಇಷ್ಟವಿಲ್ಲ ಎಂದು ಬೇಕಾದ್ದನ್ನೆಲ್ಲ ಮಾಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಇಲ್ಲೊಬ್ಬ ತನ್ನ ಉದ್ದಟತನದಿಂದ ಅರೆಸ್ಟ್ ಆಗಿದ್ದಾನೆ. ವೈರಲ್ ಆದ ವಿಡಿಯೋದಲ್ಲಿ ಕ ವ್ಯಕ್ತಿಯೊಬ್ಬ ಸಮುದ್ರದಲ್ಲೇ ಇರುವ ಬೋಟ್ ಹೌಸ್‌ನಲ್ಲಿರುವ ಹೊಟೇಲೊಂದರಲ್ಲಿ ಆಹಾರ ಸೇವನೆ ಮಾಡುತ್ತಿರುತ್ತಾನೆ.


Ad Widget

Ad Widget

Ad Widget

ಈ ವೇಳೆ ಎರಡು ಬೆಕ್ಕು ಆತನ ಕಾಲ ಬುಡದಲ್ಲಿ ಬಂದು ಆಹಾರಕ್ಕಾಗಿ ಅತ್ತಿತ್ತ ಓಡಾಡುತ್ತದೆ. ಇದನ್ನು ನೋಡಿದ ಆತ ಆಹಾರದ ಆಮಿಷ ನೀಡಿ ಬೆಕ್ಕನ್ನು ಸಮೀಪಕ್ಕೆ ಕರೆಯುತ್ತಾನೆ. ಬೆಕ್ಕು ಸಮುದ್ರದಂಚಿನಲ್ಲಿ ನಿಲ್ಲುತ್ತಿದ್ದಂತೆ ಆತ ಕಾಲಿನಲ್ಲಿ ಒದ್ದು ಬೆಕ್ಕನ್ನು ಸಮುದ್ರಕ್ಕೆ ತಳ್ಳುತ್ತಾನೆ. ಅಲ್ಲದೇ ಇನ್ನೊಂದು ಬೆಕ್ಕಿಗೂ ಇದೇ ರೀತಿ ಮಾಡಲು ಯತ್ನಿಸುತ್ತಾನೆ. ಇದನ್ನು ನೋಡಿದ ಗೆಳೆಯರು ನಗುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕೆಂದು ಜನ ಆಗ್ರಹಿಸಿದ್ದಾರೆ. ಗ್ರೀಕ್ ರಿಪೋರ್ಟರ್ ಪ್ರಕಾರ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿಗಳ ವಿರುದ್ಧ ಕ್ರೌರ್ಯ ತೋರಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಆಗ್ರಹಿಸಿದ್ದು, ಇದಾದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನಿಗೆ ಒಂದು ದಶಕದ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: